ಪಾಟ್ನಾ:ಬಿಎಸ್ಎಫ್ನ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸೇನೆಯಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಅಂತಾ ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದ ಮಾಜಿ ಯೋಧ ಇದೀಗ ನಮೋ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.
ಈಗಾಗಲೇ ಈ ಕ್ಷೇತ್ರಕ್ಕಾಗಿ ಸಮಾಜವಾದಿ ಪಕ್ಷ ಶಾಲಿನಿ ಯಾದವ್ ಹೆಸರು ಫೈನಲ್ ಮಾಡಿತ್ತು. ಅವರು ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದರು. ಆದರೆ, ಇದೀಗ ತನ್ನ ಅಭ್ಯರ್ಥಿ ಬದಲಾವಣೆ ಮಾಡಿರುವ ಪಕ್ಷ, ಮಾಜಿ ಯೋಧನಿಗೆ ಟಿಕೆಟ್ ನೀಡಿ, ಪ್ರಧಾನಿ ಮೋದಿ ಕಟ್ಟಿ ಹಾಕುವ ರಣತಂತ್ರಕ್ಕೆ ಮುಂದಾಗಿದೆ.