ಕರ್ನಾಟಕ

karnataka

ETV Bharat / briefs

ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ... ಗಂಭೀರ ಗಾಯಗೊಂಡಿದ್ದ ಆರೆಸ್ಸೆಸ್​ ನಾಯಕ ನಿಧನ

ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರ್ಮಾರ ಆಸ್ಪತ್ರೆಗೆ ನುಗ್ಗಿದ್ದ ಆಗಂತುಕ, ಗಾರ್ಡ್​ ಹಾಗೂ ಶರ್ಮಾರ ಮೇಲೆ ಗುಂಡಿನ ಮಳೆಗರೆದಿದ್ದ.

ಆರೆಸ್ಸೆಸ್​ ನಾಯಕ

By

Published : Apr 10, 2019, 9:51 AM IST

ಕಿಶ್ತವಾರ್​: ಕಣಿವೆ ರಾಜ್ಯದಲ್ಲಿ ಮಂಗಳವಾರ ಉಗ್ರರ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಆರೆಸ್ಸೆಸ್​ ನಾಯಕ ಚಂದ್ರಕಾಂತ್ ಶರ್ಮಾ ಅಸುನೀಗಿದ್ದಾರೆ.

ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರ್ಮಾರ ಆಸ್ಪತ್ರೆಗೆ ನುಗ್ಗಿದ್ದ ಆಗಂತುಕ, ಗಾರ್ಡ್​ ಹಾಗೂ ಶರ್ಮಾರ ಮೇಲೆ ಗುಂಡಿನ ಮಳೆಗರೆದಿದ್ದ. ಈ ದಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ರಾಜಿಂದರ್​​ ಕುಮಾರ್ ​ ಸ್ಥಳದಲ್ಲೇ ಅಸುನೀಗಿದ್ದ.

ಸಂಬಂಧಿತ ಸುದ್ದಿ:

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಆರ್​ಎಸ್​​ಎಸ್​ ನಾಯಕನ ಮೇಲೆ ದಾಳಿ, ಒಬ್ಬನ ಹತ್ಯೆ

ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ್ ಶರ್ಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಗದೆ ಶರ್ಮಾ ಕೊನೆಯುಸಿರೆಳೆದಿದ್ಧಾರೆ.

ಘಟನೆ ನಡೆದ ಕ್ಷಣದಿಂದಲ್ಲೇ ಕಿಶ್ತವಾರ್​ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಇಂಟರ್​ನೆಟ್ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಎನ್​ಸಿಪಿ ನಾಯಕ ಒಮರ್​ ಅಬ್ದುಲ್ಲಾ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ABOUT THE AUTHOR

...view details