ಕರ್ನಾಟಕ

karnataka

ETV Bharat / briefs

ಎ.ಮಂಜು ಕಬ್ಬಿನ ರಸ ಹೀರುವ ಕಾಡಾನೆಯಂತೆ : ಪ್ರಜ್ವಲ್ ವಾಗ್ದಾಳಿ

ಯಾವುದೇ ಸಿದ್ದಾಂತ, ಬದ್ಧತೆ ಇಲ್ಲದ ರಾಜ್ಯದ ಏಕೈಕ ಅಭ್ಯರ್ಥಿ ಎ.ಮಂಜು. ಅಧಿಕಾರ, ಹಣದಾಸೆಗೆ ಬಿದ್ದಿರುವ ವ್ಯಕ್ತಿ, ಕಾಡಾನೆಯ ರೀತಿ ಸಂಪತ್ಭರಿತವಾದ ಕಬ್ಬಿನ ಗದ್ದೆಗೆ ನುಗ್ಗಿ ರಸವನ್ನೆಲ್ಲಾ ಕುಡಿದ ನಂತರ ಮತ್ತೊಂದು ಕಬ್ಬಿನಗದ್ದೆ ಅರಸಿ ಹೋದಂತೆ ಪಕ್ಷ ಬದಲಿಸುತ್ತಾರೆ ಎಂದು ಪ್ರಜ್ವಲ್​ ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್​ ರೇವಣ್ಣ

By

Published : Apr 13, 2019, 5:45 AM IST

ಹಾಸನ/ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಸಂಪನ್ಬರಿತ ಕಬ್ಬು ಸಿಗುವ ಕಡೆ ಹೋಗಿ ರಸ ಹೀರುವ ಕಾಡಾನೆಯಿದ್ದಂತೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಟೀಕಿಸಿದ್ದಾರೆ.

ಪಟ್ಟಣದ ಆನೇಕೆರೆ ಗ್ರಾಮದಲ್ಲಿ ಕರೆಯಲಾಗಿದ್ದ ದಂಡಿಗನಹಳ್ಳಿ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಸಿದ್ದಾಂತ, ಬದ್ಧತೆ ಇಲ್ಲದ ರಾಜ್ಯದ ಏಕೈಕ ಅಭ್ಯರ್ಥಿ ಎ.ಮಂಜು. ಅಧಿಕಾರ, ಹಣದಾಸೆಗೆ ಬಿದ್ದಿರುವ ವ್ಯಕ್ತಿ, ಕಾಡಾನೆಯ ರೀತಿ ಸಂಪತ್ಭರಿತವಾದ ಕಬ್ಬಿನ ಗದ್ದೆಗೆ ನುಗ್ಗಿ ರಸವನ್ನೆಲ್ಲಾ ಕುಡಿದ ನಂತರ ಮತ್ತೊಂದು ಕಬ್ಬಿನ ಗದ್ದೆ ಅರಸಿ ಹೋಗಿದ್ದಾರೆ.

ಪ್ರಜ್ವಲ್​ ರೇವಣ್ಣ

ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರದ ರಸವನ್ನೆಲ್ಲಾ ಉಂಡು ಈಗ ಬಿಜೆಪಿಯತ್ತ ಹೋಗಿದ್ದಾರೆ. ರೈತರು ತಮ್ಮ ಗದ್ದೆಗಳಿಗೆ ನುಗ್ಗಿದ ಆನೆಗಳನ್ನು ಪಟಾಕಿ ಸಿಡಿಸಿ ಹೊರದಬ್ಬುವ ರೀತಿ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊರದಬ್ಬುವ ಕೆಲಸವನ್ನ ಈ ಜಿಲ್ಲೆಯ ಜನರಿಂದಾಗಬೇಕೆಂದರು ಎಂದು ಮಂಜು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಮೋದಿ ಮೋಡಿಗಾರ, ರೈತರ ಮನಸ್ಸಿನಲ್ಲಿ 15 ಲಕ್ಷದ ಕನಸನ್ನು ಬಿತ್ತಿ, 100 ದಿನಗಳಲ್ಲಿ ರೈತರ ಜನಧನ್ ಖಾತೆಗೆ ಹಣ ತುಂಬುವ ಭರವಸೆ ನೀಡಿ ಮುಗ್ಧ ಜನರ ಭಾವನೆಗಳೊಂದಿಗೆ ಆಟವಾಡಿದವರು. ಜನ ಈ ಬಾರಿ ಅವರನ್ನು ನಂಬುವುದಿಲ್ಲ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಜೆಡಿಎಸ್‌ನ್ನು ಗೆಲ್ಲಿಸುವ ಮೂಲಕ ರೇವಣ್ಣನವರ ಕೈ ಬಲಗೊಳಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details