ಕರ್ನಾಟಕ

karnataka

By

Published : May 5, 2019, 8:23 PM IST

ETV Bharat / briefs

ಹುಕ್ಕಾ ಬಾರ್ ಮೇಲೆ ದಾಳಿ...ಆರೋಪಿ ಬಂಧನ

ಖಚಿತ ಮಾಹಿತಿಯ ಮೇರೆಗೆ ಕೋರಮಂಗಲದ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ. ಬಲೆಗೆ ಬಿದ್ದ ಅರೋಪಿ.

ಆರೋಪಿ ಬಂಧನ

ಬೆಂಗಳೂರು :ಕೋರಮಂಗಲದಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಲಿಸರು ಕಾರ್ಯಾಚರಣೆ ವೇಳೆಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ವ್ಯಕ್ತಿ ಮುಗಿಲ್ ಬಿನ್ ಮೋಹನ್ (32) ನನ್ನು ಬಂಧಿಸಿದ್ದಾರೆ. ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ ದಿನಾಂಕ 4 ರಂದು ಕೋರಮಂಗಲ 5 ನೇ ಬ್ಲಾಕ್ ನಲ್ಲಿ ಗುಡ್ಗುಡಾ ಪ್ರೈಮ್ ಕೆಫೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details