ಜೈಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಮ್ಮ ಬೆಂಗಾವಲುಗಾರರಿಗೆ ಪ್ರತ್ಯೇಕ ಪೊಲೀಸ್ ವಾಹನ ನೀಡುವಂತೆ ಬೇಡಿಕೆಯಿಟ್ಟು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಜೈಪುರಕ್ಕೆ ತೆರಳುತ್ತಿದ್ದ ಪ್ರಹ್ಲಾದ್ ಮೋದಿಗೆ ನಿಯಾಮವಳಿಯಂತೆ ಇಬ್ಬರು ಪೊಲೀಸರನ್ನು ಬೆಂಗಾವಲಿಗೆ ಕಳುಹಿಸಲಾಗಿತ್ತು. ಆ ಇಬ್ಬರು ಬೆಂಗಾವಲುಗಾರರರಿಗೆ ಪ್ರತ್ಯೇಕ ವಾಹನ ನೀಡುವಂತೆ ಬೇಡಿಕೆ ಇಟ್ಟು ಬಗ್ರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಜೈಪುರ ಪೊಲೀಸ್ ಕಮಿಷನರ್ ಆನಂದ್ ಶ್ರೀವಾಸ್ತವ ನಿಯಮಾವಳಿಯಂತೆ ಅವರ ರಕ್ಷಣೆಗಾಗಿ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು(PSO) ಒದಗಿಸಿದ್ದೇವೆ. ಪ್ರಯಾಣದಲ್ಲಿ ಮೋದಿಯವರ ಜೊತೆ ಅಧಿಕಾರಿಗಳು ಇರಬೇಕು. ಆದರೆ ಬದ್ರತಾ ಅಧಿಕಾರಿಗಳುನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯಲು ಅವರ ವಾಹನದಲ್ಲಿ ಸ್ಥಳವಿಲ್ಲ ಎಂಬ ಕಾರಣ ನೀಡಿದ್ದು, ಬದ್ರತಾ ಅಧಿಕಾರಿಗಳಿಗಾಗಿಯೇ ಪ್ರತ್ಯೇಕ ವಾಹನ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂರು ಗಂಟೆಗಳ ಕಾಳ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಪೊಲೀಸರು ಪ್ರಹ್ಲಾದ್ ಮೋದಿಯವರಿಗೆ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಇಬ್ಬರು ಬದ್ರತಾ ಸಿಬ್ಬಂದಿಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಮೋದಿ ತೆರಳಿದ್ದಾರೆ.