ನವದೆಹಲಿ:ಕಳೆದ ಐದು ವರ್ಷದಲ್ಲಿ ಅದೆಷ್ಟೇ ಆಪಾದನೆಗಳು ಬಂದಿದ್ದರೂ ಮೋದಿ ವರ್ಚಸ್ಸಿಗೆ ಬಹುದೊಡ್ಡ ಹೊಡೆತ ಬಿದ್ದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದರೆ, ಅತ್ತ ಪಾಕಿಸ್ತಾನದಲ್ಲೂ ಮೋದಿ ಹವಾ ಭರ್ಜರಿಯಾಗಿದೆ ಎಂದು ಗೂಗಲ್ ಅಂಕಿ-ಅಂಶ ಹೇಳಿದೆ.
ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಕಳೆದ 24 ಗಂಟೆಯ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ಗೂಗಲ್ ಅಧಿಕೃತವಾಗಿ ತಿಳಿಸಿದೆ.
ಗೂಗಲ್ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಮೇ 19ರ ಸಂಜೆಯಿಂದ ಮೇ 20ರ ಬೆಳಗಿನ ತನಕ ಪಾಕಿಸ್ತಾನದ ಮಂದಿ ಗೂಗಲ್ ಹುಡುಕಾಟ ನಡೆಸಿದವರ ಪೈಕಿ ಮೋದಿ ಮೊದಲಿಗರಾಗಿದ್ದಾರೆ. ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿ ರಾಹುಲ್ ಗಾಂಧಿಯನ್ನೂ ಪಾಕ್ ಜನತೆ ಹೆಚ್ಚಾಗಿ ಹುಡುಕಾಡಿದ್ದಾರೆ.
ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗಿಂತ ಆರು ಪಟ್ಟು ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನ ಹೊರತುಪಡಿಸಿ ಬಾಂಗ್ಲಾದೇಶ, ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಮೋದಿಯನ್ನು ಗೂಗಲ್ನಲ್ಲಿ ಹೆಚ್ಚಿನ ಮಂದಿ ತಿಳಿಯುವ ಪ್ರಯತ್ನ ಮಾಡಿದ್ದಾರೆ.