ಕರ್ನಾಟಕ

karnataka

ETV Bharat / briefs

200-500 ಮುಖಬೆಲೆಯ ನೋಟ್​ಗಳಲ್ಲಿ ಮತ್ತಷ್ಟು ಬದಲಾವಣೆ... ಶೀಘ್ರವೇ ಚಲಾವಣೆಗೆ! - ಬದಲಾವಣೆ

ಶೀಘ್ರದಲ್ಲೇ ಆರ್​ಬಿಐ ಹೊಸ 200 ಮತ್ತು 500 ಮುಖಬೆಲೆಯ ನೋಟ್​ ಮಾರುಕಟ್ಟೆಗೆ ಪರಿಚಯಿಸುವುದಾಗಿ ಟ್ವೀಟ್​ ಮಾಡಿದೆ.

ನೋಟು

By

Published : Apr 24, 2019, 9:23 PM IST

ನವದೆಹಲಿ: ದೇಶದಲ್ಲಿ ನೋಟ್​ ಬ್ಯಾನ್​ ಆದ ಬಳಿಕ ಹೊಸ 2 ಸಾವಿರ, 500,200 ಹಾಗೂ 100 ರೂ ಸೇರಿದಂತೆ 50, 0 ರೂ ಮುಖಬೆಲೆಯ ನೋಟ್​ಗಳು ಚಲಾವಣೆಯಲ್ಲಿವೆ. ಇದೀಗ ಚಲಾವಣೆಯಲ್ಲಿರುವ ಹೊಸ 500,200 ಮುಖಬೆಲೆಯ ನೋಟ್​​ಗಳಲ್ಲಿ ಮತ್ತಷ್ಟು ಬದಲಾವಣೆ ಮಾಡಲು ಆರ್​ಬಿಐ ಮುಂದಾಗಿದೆ.

ಶೀಘ್ರದಲ್ಲೇ ಆರ್​ಬಿಐ ಹೊಸ 200 ಮತ್ತು 500 ಮುಖಬೆಲೆಯ ನೋಟ್​ ಮಾರುಕಟ್ಟೆಗೆ ಪರಿಚಯಿಸುವುದಾಗಿ ಟ್ವೀಟ್​ ಮಾಡಿದೆ.

ಹೊಸ ನೋಟ್​​​ಗಳಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಆರ್​​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಇರಲಿದೆ. ಸಹಿ ಹೊರತುಪಡಿಸಿ ಈಗಾಗಲೇ ಚಲಾವಣೆಯಲ್ಲಿರುವ ನೋಟ್ ಹಾಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ತಿಳಿದು ಬಂದಿದೆ.

ಮಾರುಕಟ್ಟೆಯಲ್ಲಿ ಹಳೇ ಹಾಗೂ ಹೊಸ ನೋಟ್​ಗಳು ಒಟ್ಟಿಗೆ ಚಲಾವಣೆಯಲ್ಲಿ ಇರಲಿವೆ ಎಂಬ ಮಾಹಿತಿ ಕೂಡ ಅವರು ಹೊರಹಾಕಿದ್ದಾರೆ.

ABOUT THE AUTHOR

...view details