ಕರ್ನಾಟಕ

karnataka

ವ್ಯಕ್ತಿಯ ಪ್ರಾಣವನ್ನೇ ತೆಗೆಯಿತಾ ಈ ಫಾರ್ವರ್ಡ್​ ಮೆಸೇಜ್​!!

ಆಕ್ವಾ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ್, 'ಕೋಳಿಗಳಿಗೆ ಸೋಂಕಿದ ಕೊರೊನಾ ಸಾಂಕ್ರಾಮಿಕ' ಎಂಬ ವಾಟ್ಸ್​ಆ್ಯಪ್​ ಸಂದೇಶವನ್ನು ಸ್ವೀಕರಿಸಿದ್ದಾರೆ. ಆ ಬಳಿಕ ಅವರು ಅದನ್ನು ಇತರ ಗುಂಪುಗಳಿಗೆ ರವಾನಿಸಿದ್ದಾರೆ.

By

Published : May 15, 2021, 6:08 PM IST

Published : May 15, 2021, 6:08 PM IST

Updated : May 15, 2021, 7:14 PM IST

andra
andra

ಆಂಧ್ರಪ್ರದೇಶ:ಕೊರೊನಾ ಕುರಿತಾಗಿ ಯಾವುದೇ ಫಾರ್ವರ್ಡ್ ಮೆಸೇಜ್​ ಬಂದ್ರೂ ಜೋಕೆ... ನಿಮಗೂ ಕುತ್ತು ತರಬಹುದು ಇಂತಹ ಸಂದೇಶಗಳು. ಹೀಗೇ ಬಂದ ಫಾರ್ವರ್ಡ್ ಮೆಸೇಜ್​ ಒಂದು ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿರುವ ಘಟನೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಪಟ್ಟಣದಲ್ಲಿ ನಡೆದಿದೆ.

ನಾರಾಯಣಪೇಟೆಯ ನಿವಾಸಿ ಗುತ್ತುಲಾ ಶ್ರೀನಿವಾಸ್ (38) ಆತಂಕದಿಂದ ಅನಾರೋಗ್ಯಕ್ಕೊಳಗಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ವಾಟ್ಸ್​ಆ್ಯಪ್​ ಸಂದೇಶವೊಂದನ್ನು ರವಾನಿಸಿದ ಆರೋಪದ ಮೇಲೆ ಪೊಲೀಸರು ಈತನನ್ನು ತನಿಖೆ ನಡೆಸಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಶ್ರೀನಿವಾಸ್ ನೊಂದಿದ್ದ ಎನ್ನಲಾಗಿದೆ. ಪತಿ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿರುವ ಆತನ ಪತ್ನಿ, ಪೊಲೀಸರ ಕಿರುಕುಳದಿಂದಾಗಿಯೇ ಶ್ರೀನಿವಾಸ್​ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ವೆಂಕಟಪದ್ಮಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ನೀಡಿದ್ದಾರೆ.

ನಡೆದಿದ್ದೇನು?

ಆಕ್ವಾ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ್, 'ಕೋಳಿಗಳಿಗೆ ಸೋಂಕಿದ ಕೊರೊನಾ ಸಾಂಕ್ರಾಮಿಕ' ಎಂಬ ವಾಟ್ಸ್​ಆ್ಯಪ್​ ಸಂದೇಶವನ್ನು ಸ್ವೀಕರಿಸಿದ್ದಾರೆ. ಆ ಬಳಿಕ ಅವರು ಅದನ್ನು ಇತರ ಗುಂಪುಗಳಿಗೆ ರವಾನಿಸಿದ್ದಾರೆ. ಈ ಬಗ್ಗೆ ದೂರು ಸ್ವೀಕರಿಸಿದ ಹೈದರಾಬಾದ್ ಸೈಬರ್ ಅಪರಾಧ ಪೊಲೀಸರು ಶುಕ್ರವಾರ ಶ್ರೀನಿವಾಸ್ ಅವರನ್ನು ಕರೆದು ಪ್ರಶ್ನಿಸಿದ್ದಾರೆ.

ಆದರೆ, ಈ ಬಗ್ಗೆ ತನಗೇನೂ ತಿಳಿದಿಲ್ಲ, ಎಂದು ಶ್ರೀನಿವಾಸ್ ಹೇಳುತ್ತಿದ್ದರೂ ಪೊಲೀಸರು ಮಾತ್ರ ಕೇಳಿಲ್ಲ. ಈ ವಿಚಾರವಾಗಿ ಶ್ರೀನಿವಾಸ್ ತುಂಬಾ ಆತಂಕಕ್ಕೊಳಗಾದರು. ಅಲ್ಲದೇ ಅವರು ಹೆದರಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೂ ಒಳಗಾದರು. ಅವರನ್ನು ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ ಯಾವ ಆಸ್ಪತ್ರೆಗಳೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ಅಂತಿಮವಾಗಿ ಅವರು ಅಮಲಾಪುರಂ ಕಿಮ್ಸ್​ನಲ್ಲಿ ಪ್ರವೇಶ ಪಡೆದರು. ಆದರೆ ಚಿಕಿತ್ಸೆ ಪಡೆದು ಒಂದು ಗಂಟೆಯೊಳಗಾಗಿ ಅವರು ಸಾವನ್ನಪ್ಪಿದ್ದಾರೆ.

ಪೊಲೀಸರು ವಶ ಪಡಿಸಿಕೊಂಡಿದ್ದ ಅವರ ಮೊಬೈಲ್ ಫೋನ್​ ಅನ್ನು ಬಳಿಕ ಮರಳಿ ನೀಡಲಾಗಿದೆ. ಹೈದರಾಬಾದ್‌ನ ಸೈಬರ್ ಕ್ರೈಂನ ಸಿಐ ರಾಜೇಶ್ ಮತ್ತು ಎಸ್‌ಐ ರಂಜಿತ್ ಕುಮಾರ್ ಅವರು ತನ್ನ ಪತಿಯನ್ನು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಶ್ರೀನಿವಾಸ್​ ಪತ್ನಿ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಅಮಲಪುರಂ ಪಟ್ಟಣ ಉಸ್ತುವಾರಿ ಎಸ್‌ಐ ಸತ್ಯಪ್ರಸಾದ್ ತಿಳಿಸಿದ್ದಾರೆ.

Last Updated : May 15, 2021, 7:14 PM IST

ABOUT THE AUTHOR

...view details