ಬೆಂಗಳೂರು:ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆ ಕೈ ಕಳೆದುಕೊಂಡಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಲೀಕರ ನಿರ್ಲಕ್ಷ್ಯ, ಕಸದ ಮಷಿನ್ನಿಂದ ಬಲಗೈ ಕಳೆದುಕೊಂಡ ಹೌಸ್ ಕೀಪಿಂಗ್ ಮಹಿಳೆ..! - ಬೆಂಗಳೂರು
ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆ ಕೈ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಶಾರದ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ರು. ನಿತ್ಯ ಅಪಾರ್ಟ್ಮೆಂಟ್ ಸುತ್ತ ಮುತ್ತಲಿನ ಕಸ ಗೂಡಿಸಿ ಮಷಿನ್ನಲ್ಲಿ ಹಾಕುವಂತೆ ಕುಮಾರ್ ಎಂಬುವವರು ಹೇಳಿದ್ದಾರೆ. ಕಸವನ್ನ ಕಡ್ಡಿಯಿಂದ ದೂಡುತ್ತಿದ್ದಾಗ ಆಯಾ ತಪ್ಪಿ ಕಡ್ಡಿ ಮಷಿನ್ನೊಳಗೆ ಬಿದ್ದಿದೆ. ಈ ವೇಳೆ ಬಿದ್ದ ಕಡ್ಡಿ ತೆಗೆಯಲು ಹೋಗಿ ಶಾರದಮ್ಮ ಬಲಗೈ ತುಂಡಾಗಿದೆ. ಸದ್ಯ ಗಾಯಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಸೂಕ್ತ ತರಬೇತಿ ಮತ್ತು ಸುರಕ್ಷತೆ ನೀಡದೇ ಮಹಿಳೆಯನ್ನ ಕೆಲಸ ಮಾಡುವಂತೆ ಹೇಳಿದ ಪೆಸಿಲಿಟಿ ಸರ್ವಿಸ್ ಪ್ರೈ.ಲಿ ಮಾಲೀಕ ಹಾಗೂ ಸೂಪರ್ವೈಸರ್ ಕುಮಾರ್ ವಿರುದ್ಧ ಕೋಣನ ಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.