ಓವಲ್:ವಿಶ್ವಕಪ್ ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಇಂದು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಟೂರ್ನಿಯ ಎರಡನೇ ಪಂದ್ಯವಾಡುತ್ತಿರುವ ಭಾರತಕ್ಕೆ ಎರಡು ಪಂದ್ಯ ಗೆದ್ದಿರುವ ಫಿಂಚ್ ಪಡೆ ನಡುವೆ ರೋಚಕ ಹಣಾಹಣಿ ನಡೆಯುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಇದನ್ನೂ ಓದಿ... ಭಾರತ ವಿರುದ್ಧ ಪಾಕ್ 'ವಿಶೇಷ ಸಂಭ್ರಮ'ಕ್ಕಿಲ್ಲ ಪ್ರಧಾನಿ ಅನುಮತಿ.. ಸರ್ಫರಾಜ್ ತಂಡಕ್ಕೆ ಪಂದ್ಯಕ್ಕೂ ಮುನ್ನವೇ ಮುಖಭಂಗ!
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಆರು ವಿಕೆಟ್ಗಳಿಂದ ಭಾರತ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಅತ್ತ ಆಸೀಸ್ ಪ್ರಥಮ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ನಂತರದಲ್ಲಿ ವೆಸ್ಟ್ ಇಂಡೀಸ್ ಟೀಂ ಸೋಲಿಸಿ ಹುಮ್ಮಸ್ಸಿನಲ್ಲಿದೆ. ಓವಲ್ ಪಿಚ್ ಬ್ಯಾಟ್ಸ್ಮನ್ಗಳಿಗೆ ಪೂರಕವಾಗಿದ್ದು ಸಾಕಷ್ಟು ರನ್ ಬರುವ ನಿರೀಕ್ಷೆ ಇದೆ. ಎರಡೂ ಅಗ್ರ ತಂಡಗಳಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ದೊಡ್ಡ ಮೊತ್ತದ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ...ಸೆಂಚುರಿ ಸಂಭ್ರಮದಲ್ಲಿ ಅಂಪೈರ್ಗೆ ಗುದ್ದಿ ಬೀಳಿಸಿದ ಇಂಗ್ಲೆಂಡ್ ಬ್ಯಾಟ್ಸ್ಮನ್!