ಮೈಸೂರು: ನಾನು ಸನ್ಯಾಸಿಯಾಗಲು ಹೊರಟಿಲ್ಲ, ನಿಮ್ಮ ಟೀಕೆಗೆ ಉತ್ತರ ಕೊಡುವ ಯೋಗ್ಯತೆ ಮತ್ತು ಸಾಮಾರ್ಥ್ಯ ನನಗೆ ಇದೇ ಎಂದು ಹೆಚ್.ಡಿ. ದೇವೇಗೌಡರು ನರೇಂದ್ರ ಮೋದಿಯವರ ಟೀಕೆಗೆ ಟಾಂಗ್ ನೀಡಿದ್ದಾರೆ.
ಶುಕ್ರವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮರಾಜನಗರ ಹಾಗೂ ಮೈಸೂರು ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆದ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ. ದೇವೇಗೌಡರು ಇಂದು ಪ್ರಧಾನಿ ನರೇಂದ್ರ ಮೋದಿಯವರು ನನ್ನ ಕುರಿತು ಆಡಿರುವ ಮಾತುಗಳ ಬಗ್ಗೆ ಉತ್ತರ ಕೊಡುವ ಯೋಗ್ಯತೆ ಮತ್ತು ಸಾಮರ್ಥ್ಯ ದೇವೇಗೌಡರಿಗೆ ಇದೇ. ನಾನು ಸನ್ಯಾಸಿಯಾಗಲು ಹೊರಟಿಲ್ಲ, ನಾನು ರೈತನ ಮಗ ಎಂದು ಮೋದಿಯವರ ಟೀಕೆಗೆ ಟಾಂಗ್ ನೀಡಿದರು.
ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ದೇವೇಗೌಡ ದೇವೇಗೌಡರು ನಾಲ್ಕು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಜೊತೆ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ಥಳೀಯ ಮುಖಂಡರ ಜೊತೆ ಏನೇ ಸಂಘರ್ಷವಿದ್ದರೂ ರಾಷ್ಟ್ರ ಮಟ್ಟದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಲು ನಾವೆಲ್ಲಾ ಒಂದಾಗಬೇಕಾಗಿದ್ದು, ಯಾವುದೇ ವಂಚನೆ ಮಾಡದೇ ಸ್ಥಳೀಯ ಮೈತ್ರಿ ಅಭ್ಯರ್ಥಿಗಳಾದ ವಿಜಯ್ ಶಂಕರ್ ಹಾಗೂ ದ್ರುವ ನಾರಾಯಣ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಸೋಷಿಯಲ್ ಮೀಡಿಯಗಳಲ್ಲಿ ಬಿಂಬಿತವಾಗಿರುವ ವಿಷಯಗಳ ಬಗ್ಗೆ ಯುವ ಜನರು ಮೋಸ ಹೋಗಬೇಡಿ ಎಂದು ಹೇಳಿದ ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಬದಲು ವಿಜಯ ಸಂಕೇಶ್ವರ್ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬದಲಿಗೆ ಜಯ ಸಿಂಹ ಎಂದು ಹೇಳಿದ್ದು ವಿಶೇಷವಾಗಿತ್ತು.