ಕರ್ನಾಟಕ

karnataka

ETV Bharat / briefs

ರಜೆ ಮಜೆಗೆ ಐಎನ್​ಎಸ್​ ಬಳಕೆ ಆಗ್ತಿತ್ತು.. ಮತ್ತೆ ಗಾಂಧಿ ಕುಟುಂಬ ಟಾರ್ಗೆಟ್​ ಮಾಡಿದ ನಮೋ - ಯುದ್ಧ ವಿಮಾನ

ರಾಜೀವ್​ ಗಾಂಧಿ ವಿರುದ್ಧ ಮೋದಿ ವೈಯಕ್ತಿಕ ದಾಳಿಯಿಂದ ಕೆಂಡಮಂಡಲರಾಗಿದ್ದ ರಾಹುಲ್​, ಮುಗಿಯಿತು ಹೋರಾಟ, ನಮ್ಮ ತಂದೆ ಹೆಸರು ಎಳೆದುತಂದಿದ್ದು ನಿಮ್ಮ ಕರ್ಮ ಎಂದು ಟ್ವೀಟ್​ ಮೂಲಕ ಎದರಿರೇಟು ನೀಡಿದ್ದರು. ಪ್ರಿಯಾಂಕ ವಾದ್ರಾ ಸಹ ವಾಗ್ದಾಳಿ ನಡೆಸಿದ್ದರು. ಅಷ್ಟೇ ಏಕೆ,  ಸಂಪೂರ್ಣ ಕಾಂಗ್ರೆಸ್ ಮೋದಿ ಮೇಲೆ ಮುಗಿಬಿದ್ದಿತ್ತು

ಮೋದಿ

By

Published : May 8, 2019, 10:43 PM IST

ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಆರೋಪ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಆರೋಪ ಮಾಡಿದ್ದಾರೆ. ಚೌಕಿದಾರ್​ ಚೋರ್​ ಹೈ ಎಂದು ಪ್ರತಿ ಭಾಷಣದಲ್ಲಿ ನೇರ ವಾಗ್ದಾಳಿ ನಡೆಸಿದ್ದ ರಾಹುಲ್​ ಆರೋಪಕ್ಕೆ ಬಹಳ ದಿನಗಳಿಂದ ಸುಮ್ಮನಿದ್ದ ಪ್ರಧಾನಿ ಇತ್ತೀಚೆಗೆ ಸಿಡಿದೆದ್ದಿದ್ದರು. ರಾಹುಲ್​ ಗಾಂಧಿ ತಂದೆ ರಾಜೀವ್​ ಗಾಂಧಿ ನಂಬರ್ ಒನ್​ ಭ್ರಷ್ಟಾಚಾರಿ ಎಂದು ಜರಿದಿದ್ದರು.

ಮೋದಿ ಅವರ ಈ ವೈಯಕ್ತಿಕ ದಾಳಿಯಿಂದ ಕೆಂಡಮಂಡಲರಾಗಿದ್ದ ರಾಹುಲ್​, ಮುಗಿಯಿತು ಹೋರಾಟ, ನಮ್ಮ ತಂದೆ ಹೆಸರು ಎಳೆದುತಂದಿದ್ದು ನಿಮ್ಮ ಕರ್ಮ ಎಂದು ಟ್ವೀಟ್​ ಮೂಲಕ ಎದರಿರೇಟು ನೀಡಿದ್ದರು. ಪ್ರಿಯಾಂಕ ವಾದ್ರಾ ಸಹ ವಾಗ್ದಾಳಿ ನಡೆಸಿದ್ದರು. ಅಷ್ಟೇ ಏಕೆ, ಸಂಪೂರ್ಣ ಕಾಂಗ್ರೆಸ್ ಮೋದಿ ಮೇಲೆ ಮುಗಿಬಿದ್ದಿತ್ತು.

ಇದೆಲ್ಲದಕ್ಕೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ಮೋದಿ ಮತ್ತೆ ರಾಜೀವ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಕರಾವಳಿ ತೀರಗಳ ಮೇಲೆ ಹಾಗೂ ದೇಶದ ಸರಹದ್ದುಗಳ ಮೇಲೆ ಕಣ್ಗಾವಲು ಇಡಬೇಕಾದ ಐಎನ್​ಎಸ್​ ವಿರಾಟ್​ ರಾಜೀವ್​ ಗಾಂಧಿ ಹಾಗೂ ಅವರ ಕುಟುಂಬದವರು ಕಾಲ ಕಳೆಯಲು ಐಲ್ಯಾಂಡ್​ ಆಗಿ ಮಾರ್ಪಾಡಾಗುತ್ತಿತ್ತು ಎಂದು ಆರೋಪಿಸಿದ್ದು, ಸಂಬಂಧಿಕರ ಅಡ್ಡೆಯಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ ಇದು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆ ಅಲ್ಲವೇ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ, ಅರವಿಂದ್​ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ದೆಹಲಿ ರಾಜ್ಯ ಸರ್ಕಾರವನ್ನ ನಕಾಮಪಂಥಿ ಸರ್ಕಾರ ಎಂದು ಜರಿದಿದ್ದಾರೆ. ತುಕ್ಡೆ ತುಕ್ಡೆ ಗ್ಯಾಂಗ್​ ಭಾರತದ ವಿರೋಧಿಗಳಿಗೆ ಬಲ ನೀಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ABOUT THE AUTHOR

...view details