ಕಲಬುರಗಿ: ಕುರಿಗಾಯಿ ಬಳಿ ಇರುವ ಹರಿತವಾದ ಕುಡುಗೋಲು ಕುತ್ತಿಗೆಗೆ ತಗುಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ರಾಮಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಹಾಗೂ ರಾಮ ಮಂದಿರ ಬಳಿಯ ಕರುಣೇಶ್ವರ ಕಾಲೋನಿ ನಿವಾಸಿ ಮೇಘಾ (20) ಮೃತ ವಿದ್ಯಾರ್ಥಿನಿ.
ಬೈಕ್ನಲ್ಲಿ ಹೋಗುವಾಗ ಕುಡುಗೋಲು ತಗುಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಸಾವು...! - ಕಲಬುರಗಿ
ಕುಡಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ರಾಮಮಂದಿರದಿಂದ ನಾಗನಳ್ಳಿ ರಸ್ತೆಯಲ್ಲಿ ತನ್ನ ಆ್ಯಕ್ಟಿವಾದಲ್ಲಿ ಕಾಲೇಜಿಗೆ ವೇಗವಾಗಿ ತೆರಳುತ್ತಿದ್ದಾಗ, ಅದೇ ರಸ್ತೆಯಲ್ಲಿ ಕುರಿಗಾಯಿ ತನ್ನ ಸೈಕಲ್ ಮೇಲೆ ಹರಿತವಾದ ಕುಡುಗೋಲು ಇಟ್ಟುಕೊಂಡು ಬರುತ್ತಿದ್ದ. ಕುಡುಗೋಲು ನೇರವಾಗಿ ಯುವತಿ ಕುತ್ತಿಗೆಗೆ ಬಂದು ತಗುಲಿದ ಪರಿಣಾಮ, ರುಂಡ ಕತ್ತರಿಸಿ ತೀವ್ರ ರಕ್ತಸ್ರಾವದಿಂದ ಬಳಲಿ ಯುವತಿ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆ ನಂತರ ಸೈಕಲ್ ಮತ್ತು ಕುಡುಗೋಲು ಸ್ಥಳದಲ್ಲಿಯೇ ಬಿಟ್ಟು ಕುರಿಗಾಯಿ ಪರಾರಿಯಾಗಿದ್ದಾನೆ. ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.