ಕರ್ನಾಟಕ

karnataka

ETV Bharat / briefs

ಇದೇ ಮೊದಲು: ಪೆಟ್ರೋಲಿಂಗ್​​ಗೆ ಮಹಿಳಾ ಅರಣ್ಯಾಧಿಕಾರಿ! - ಅರಣ್ಯ ಇನ್ಸ್‌ಪೆಕ್ಟರ್ ಮಮತಾ ಕನ್ವಾಸಿ

ನಂದಾ ದೇವಿ ಪರ್ವತ ಶ್ರೇಣಿಯು ಭಾರತದ ಎರಡನೇ ಅತಿ ಎತ್ತರದ ಶಿಖರಗಳಲ್ಲಿ ಮತ್ತು ವಿಶ್ವದ 23ನೇ ಸ್ಥಾನದಲ್ಲಿದೆ. ಚಮೋಲಿ ಜಿಲ್ಲೆಯ ಗೌರಿಗಂಗಾ ಮತ್ತು ರಿಷಿ ಗಂಗಾ ಕಣಿವೆಯ ನಡುವೆ ಇರುವ ನಂದಾ ದೇವಿ ಪರ್ವತ ಪ್ರದೇಶವು 7,817 ಮೀಟರ್ ಎತ್ತರದಲ್ಲಿದೆ. ಇಲ್ಲಿಗೆ ಮೊದಲ ಬಾರಿಗೆ ಇಬ್ಬರು ಮಹಿಳಾ ಅರಣ್ಯ ನಿರೀಕ್ಷಕರು ಮತ್ತು ಮಹಿಳಾ ಅರಣ್ಯ ಕಾನ್ಸ್​ಟೇಬಲ್​ ನಿಯೋಜಿಸಲಾಗಿದ್ದು, ಅರಣ್ಯ ಮತ್ತು ಅಪರೂಪದ ವನ್ಯಜೀವಿಗಳ ಮೇಲ್ವಿಚಾರಣೆ ನಡೆಸಿದ್ದಾರೆ.

ನಂದಾ ದೇವಿ
ನಂದಾ ದೇವಿ

By

Published : Jun 15, 2021, 4:03 PM IST

ಚಮೋಲಿ:ದೇಶದ ಎರಡನೇ ಅತಿ ಎತ್ತರದ ಶಿಖರ ನಂದಾದೇವಿಯಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಅರಣ್ಯ ನಿರೀಕ್ಷಕರು ಮತ್ತು ಮಹಿಳಾ ಅರಣ್ಯ ಕಾನ್ಸ್​​​ ಟೇಬಲ್​ ನಿಯೋಜಿಸಲಾಗಿದ್ದು, ಅರಣ್ಯ ಮತ್ತು ಅಪರೂಪದ ವನ್ಯಜೀವಿಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಇಲ್ಲಿಯವರೆಗೆ, ಜೋಶಿಮಠ ಪ್ರದೇಶದಲ್ಲಿರುವ ಎತ್ತರದ ಹಿಮಾಲಯನ್ ಪ್ರದೇಶದ ನಂದಾ ದೇವಿ ಬಯೋಸ್ಫಿಯರ್ ರಿಸರ್ವ್‌ನಲ್ಲಿ ಪುರುಷ ಅರಣ್ಯ ನಿರೀಕ್ಷಕರು ಮತ್ತು ಅರಣ್ಯ ಕಾನ್‌ಸ್ಟೆಬಲ್ ಮಾತ್ರ ನಿಯೋಜಿಸಲಾಗಿತ್ತು.

ಭೌಗೋಳಿಕ ಪರಿಸ್ಥಿತಿ ಕಷ್ಟಕರವಾದ ಕಾರಣ, ಇಲ್ಲಿಯವರೆಗೆ ಪುರುಷ ಅರಣ್ಯ ನಿರೀಕ್ಷಕರು ಮತ್ತು ಅರಣ್ಯ ಸಿಬ್ಬಂದಿ ನಂದಾ ದೇವಿ ಜೀವಗೋಳ ಪ್ರದೇಶದಲ್ಲಿನ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಸಿದ್ಧರಾಗಿದ್ದರು. ಆದರೆ, ಈ ವರ್ಷದಿಂದ ನಂದಾ ದೇವಿಯ ಉಸ್ತುವಾರಿ ನಿರ್ದೇಶಕ ಅಮಿತ್ ಕನ್ವರ್ ಅವರ ಉಪಕ್ರಮದಲ್ಲಿ ಈ ಜವಾಬ್ದಾರಿಯನ್ನು ಮಹಿಳಾ ಅರಣ್ಯ ಅಧಿಕಾರಿ ಮತ್ತು ಅರಣ್ಯ ಸಿಬ್ಬಂದಿ ವಹಿಸಿಕೊಂಡಿದ್ದಾರೆ. ಕಾನ್ಸ್​​ಟೇಬಲ್​ಗಳನ್ನು ಸಹ ನಿಯೋಜಿಸಲಾಗಿದೆ.

ರೇಂಜ್ ಆಫೀಸರ್ ನಂದಾ ದೇವಿ ವಿಯೋಸ್ಪಿಯರ್ ಚೆಟ್ನಾ ಕಾಂಡ್ಪಾಲ್ ಅವರ ನಿರ್ದೇಶನದ ಮೇರೆಗೆ ನಿರ್ದೇಶಕ ಉಸ್ತುವಾರಿ ಅಮಿತ್ ಕನ್ವರ್ ಅವರ ಸೂಚನೆಗಳನ್ನು ಅನುಸರಿಸಿ ಮಹಿಳಾ ಅರಣ್ಯ ನಿರೀಕ್ಷಕರು ಮತ್ತು ಅರಣ್ಯ ಕಾನ್ಸ್​ಟೇಬಲ್​ ಕಾರ್ಯಾಚರಣೆ ನಡೆಸಲಿದ್ದಾರೆ.

ಜೂನ್ 1 ರಂದು ಅರಣ್ಯ ಇಲಾಖೆಯ ತಂಡವು ಲತಾ ಖಾರ್ಕ್, ಭೆಟಾ, ಧರ್ಸಿ ಮತ್ತು ಸೈನಿ ಖಾರ್ಕ್‌ಗೆ ತೆರಳಿತ್ತು. ತಂಡದಲ್ಲಿ ಹಾಜರಿದ್ದ 12 ಸದಸ್ಯರಲ್ಲಿ ಮೊದಲ ಬಾರಿಗೆ ಅರಣ್ಯ ಇನ್ಸ್‌ಪೆಕ್ಟರ್ ಮಮತಾ ಕನ್ವಾಸಿ, ದುರ್ಗಾ ಸತಿ ಮತ್ತು ಅರಣ್ಯ ಸಿಬ್ಬಂದಿ ರೋಶ್ನಿ ಸೇರಿದಂತೆ ಮೂವರು ಮಹಿಳೆಯರು ತೆರಳಿದ್ದರು.

ನಂದಾ ದೇವಿ ಪರ್ವತ ಶ್ರೇಣಿಯು ಭಾರತದ ಎರಡನೇ ಅತಿ ಎತ್ತರದ ಶಿಖರಗಳಲ್ಲಿ ಮತ್ತು ವಿಶ್ವದ 23ನೇ ಸ್ಥಾನದಲ್ಲಿದೆ. ಚಮೋಲಿ ಜಿಲ್ಲೆಯ ಗೌರಿಗಂಗಾ ಮತ್ತು ರಿಷಿ ಗಂಗಾ ಕಣಿವೆಯ ನಡುವೆ ಇರುವ ನಂದಾ ದೇವಿ ಪರ್ವತ ಪ್ರದೇಶವು 7,817 ಮೀಟರ್ ಎತ್ತರದಲ್ಲಿದೆ. ಅರಣ್ಯ ಪ್ರದೇಶವಾಗಿರುವುದರಿಂದ, ಅಪರೂಪದ ಪ್ರಾಣಿಗಳ ಮೇಲೆ ನಿಗಾ ಇಡಲು ಮತ್ತು ಕಳ್ಳ ಬೇಟೆಗಾರರನ್ನು ಹಿಡಿಯಲು ಅರಣ್ಯ ಇಲಾಖೆಯ ತಂಡಗಳು ಕಾಲಕಾಲಕ್ಕೆ ಇಲ್ಲಿ ಗಸ್ತು ತಿರುಗುತ್ತವೆ.

ABOUT THE AUTHOR

...view details