ಬೆಂಗಳೂರು:ಕರ್ನಾಟಕ ರಾಜ್ಯದಿಂದ 22 ಮಂದಿಯನ್ನು ದೆಹಲಿಗೆ ಕಳುಹಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಕನಸು ಸದ್ಯದ ಟ್ರೆಂಡ್ನಲ್ಲಿ ಬಹುತೇಕ ನನಸಾದಂತಿದೆ.
ಸದ್ಯದ ಚಿತ್ರಣ ನಿಜವಾದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಧೂಳೀಪಟ ಮಾಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಲೋಕಸಮರ ಉದ್ದೇಶವೂ ಇದ್ದ ಮೈತ್ರಿಯಲ್ಲಿ ಪ್ಲಾನ್ಗಳು ವರ್ಕೌಟ್ ಆದಂತೆ ಕಾಣುತ್ತಿಲ್ಲ.
ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು,ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ,ಕೋಲಾರ,ರಾಯಚೂರು,ಕೊಪ್ಪಳ,ಚಿಕ್ಕೋಡಿ,ಚಿಕ್ಕಬಳ್ಳಾಪುರ, ಉತ್ತರ ಕನ್ನಡ,ಶಿವಮೊಗ್ಗ ಕ್ಷೇತ್ರ ಸೇರಿದಂತೆ 22 ಕ್ಷೇತ್ರದಲ್ಲಿ ಬಿಜೆಪಿ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಗೆಲುವಿನ ನಗೆ ಬೀರಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬಿಜೆಪಿ ಇನ್ನಾವುದೇ ರಾಜ್ಯದಲ್ಲಿ ನೆಲೆ ಇಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಕರ್ನಾಟದಲ್ಲಿ ಮಾತ್ರವೇ ಬಿಜೆಪಿ ಸಾಧ್ಯವಾದಷ್ಟು ಕ್ಷೇತ್ರ ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ. ಬಿಜೆಪಿ 20ರ ಗಡಿ ದಾಟಿದರೆ ಯಡಿಯೂರಪ್ಪ ರಾಜಕೀಯ ಭವಿಷ್ಯಕ್ಕೂ ಉತ್ತಮ ಬೂಸ್ಟ್ ನೀಡಲಿದೆ.