ಕರ್ನಾಟಕ

karnataka

ETV Bharat / briefs

ಬಾರ್ಯ ಗ್ರಾ.ಪಂ. ಅವ್ಯವಹಾರ ಬಯಲು: ಪಿಡಿಒ ಸಹಿತ ಸಿಬ್ಬಂದಿಗೆ ಹಣ ಮರು ಪಾವತಿಗೆ ಆದೇಶ

ಬಾರ್ಯ ಗ್ರಾ.ಪಂ. ರಶೀದಿ ಪುಸ್ತಕಗಳನ್ನು ದುರುಪಯೋಗ ಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತನಿಖೆ ನಡೆಸಿದರು. ಅವ್ಯವಹಾರ ಮಾಡಿದ ಹಣವನ್ನು ಮರು ಪಾವತಿಗೆ ಆದೇಶಿಸಿದರು.

Panchayath
Panchayath

By

Published : Jun 12, 2020, 7:55 PM IST

ಬೆಳ್ತಂಗಡಿ:ಬಾರ್ಯ ಗ್ರಾ.ಪಂ. ರಶೀದಿ ಪುಸ್ತಕಗಳನ್ನು ದುರುಪಯೋಗ ಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕಾರಿಗಳು ತನಿಖೆ ನಡೆಸಿದರು.

ಬಾರ್ಯ ಗ್ರಾಮ ಪಂಚಾಯತ್​ನಲ್ಲಿ 2017-18ರ ಸಾಲಿನಲ್ಲಿ ರಶೀದಿ ಪುಸ್ತಕಗಳನ್ನು ದುರುಪಯೋಗ ಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣದ ಸಂಬಂಧ ತನಿಖೆ ನಡೆಸಿರುವ ದ.ಕ. ಜಿಲ್ಲಾ ಪಂಚಾಯತ್​ ಅಧಿಕಾರಿಗಳು, ಪಿಡಿಒ ಸಹಿತ 6 ಮಂದಿ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಅಲ್ಲದೆ ಈಗಾಗಲೇ ನಡೆದಿರುವ 10,92,108 ರೂ. ಅವ್ಯವಹಾರದ ಹಣವನ್ನು ಪಾವತಿಸಲಾಗಿದ್ದು, ಅದರ ಶೇ.15 ಬಡ್ಡಿ ಹಣ 4,55,861 ರೂ. ಪಾವತಿ ಮಾಡುವಂತೆ ಆದೇಶಿಸಿದ್ದಾರೆ.

2016-17 ಮತ್ತು 2017-18ನೇ ಲೆಕ್ಕ ಪರಿಶೋಧನೆಯಲ್ಲಿ ಗ್ರಾ.ಪಂಚಾಯಿತಿಯ ರಶೀದಿ ಪುಸ್ತಕಗಳನ್ನು ದುರುಪಯೋಗ ಪಡಿಸಿ ನೀರಿನ ಬಿಲ್ ವಸೂಲಿಯಲ್ಲಿ ಕ್ರಮವಾಗಿ 6,92,377 ರೂ. ಮತ್ತು 3,99,731 ಸೇರಿದಂತೆ ಒಟ್ಟು 10,92,108 ರಷ್ಟು ಮೊತ್ತವನ್ನು ಬ್ಯಾಂಕಿನಲ್ಲಿರುವ ಸಂಬಂಧಿಸಿದ ಖಾತೆಗೆ ಜಮೆ ಆಗದಿರುವುದು ಕಂಡು ಬಂದಿದ್ದು, ಈ ಹಣವನ್ನು ವಸೂಲಿ ಮಾಡಿ ನೀರಿನ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿತ್ತು.

ಅದರಂತೆ ಈ ಹಣವನ್ನು 10 ಕಂತುಗಳಲ್ಲಿ ಪಾವತಿ ಮಾಡಲಾಗಿದೆ. ಆದರೆ ದುರುಪಯೋಗಪಡಿಸಿದ ಮೊತ್ತಕ್ಕೆ ಶೇ.15ರಷ್ಟು ಬಡ್ಡಿಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯಿಂದ ವಸೂಲಿ ಮಾಡಿ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗ್ರಾಮ ಪಂಚಾಯತ್ ನ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪ್ರಸ್ತಕ ಚೆನ್ನರಾಯಪಟ್ಟಣ ಜುಟ್ಟನಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೆಚ್.ಡಿ. ದೇವರಾಜ್, ಬಾರ್ಯ ಗ್ರಾ.ಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜು, ಗುಮಾಸ್ತೆ ಪ್ರಮೀಳ, ತೆರಿಗೆ ಸಂಗ್ರಹಕ ಸಂಜೀವ, ನಲ್ಲಿ ನೀರಿನ ಬಿಲ್​ ಕಲೆಕ್ಟರ್ ಮಾಧವ ಮತ್ತು ಗ್ರಾ.ಪಂ ಜವಾನ ಕುಶಾಲಪ್ಪ ಇವರಿಗೆ ನೋಟಿಸ್ ಜಾರಿ ಮಾಡಿ 4.55 ಲಕ್ಷ ರೂ. ಮರು ಪಾವತಿ ಮಾಡುವಂತೆ ಆದೇಶಿಸಲಾಗಿದೆ.

ABOUT THE AUTHOR

...view details