ಕರ್ನಾಟಕ

karnataka

ETV Bharat / briefs

ಥ್ರಿ ಅವರ್​​​ ಕೌಂಟ್​:  ಟ್ರೆಂಡಿಂಗ್​ನಲ್ಲಿ ಎನ್​ಡಿಎ ತ್ರಿ ಶತಕ... ಕರ್ನಾಟಕದಲ್ಲಿ 'ಕೈ'ಗೆ ಬಿಗ್​ ಶಾಕ್​​ - ಚುನಾವಣೆ

ಹನ್ನೊಂದು ಗಂಟೆಯ ವೇಳೆಯಲ್ಲೂ ನಿರೀಕ್ಷೆಯಂತೆ ಎನ್​ಡಿಎ ಮೈತ್ರಿಕೂಟ ನಿಚ್ಚಳ ಬಹುಮತದತ್ತ ದಾಪುಗಾಲು ಇಟ್ಟಿದೆ. ನಿರಾಯಾಸವಾಗಿ 300 ಗಡಿ ದಾಟಿರುವ ಎನ್​ಡಿಎ ಪ್ರಸ್ತುತ 331 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಯುಪಿಎ 82 ಹಾಗೂ ಇತರರು 129 ಕ್ಷೇತ್ರದಲ್ಲಿ ಮುಂದಿದೆ.

ಥ್ರೀ ಅವರ್​​

By

Published : May 23, 2019, 11:12 AM IST

ನವದೆಹಲಿ/ಬೆಂಗಳೂರು:ಮತ ಎಣಿಕೆ ಕಾರ್ಯ ನಿಧಾನವಾಗಿ ಪ್ರತಿಯೊಂದು ಪಕ್ಷದ ಹಣೆಬರಹ ನಿರ್ಧಾರವಾಗುತ್ತಿದ್ದು ಎಕ್ಸಿಟ್ ಪೋಲ್​​ ಪ್ರಕಾರವೇ ಫಲಿತಾಂಶ ಹೊರ ಬೀಳುತ್ತಿದೆ.

ಹನ್ನೊಂದು ಗಂಟೆಯ ವೇಳೆಯಲ್ಲೂ ನಿರೀಕ್ಷೆಯಂತೆ ಎನ್​ಡಿಎ ಮೈತ್ರಿಕೂಟ ನಿಚ್ಚಳ ಬಹುಮತದತ್ತ ದಾಪುಗಾಲು ಇಟ್ಟಿದೆ. ನಿರಾಯಾಸವಾಗಿ 300 ಗಡಿ ದಾಟಿರುವ ಎನ್​ಡಿಎ ಪ್ರಸ್ತುತ 331 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಯುಪಿಎ 82 ಹಾಗೂ ಇತರರು 129 ಕ್ಷೇತ್ರದಲ್ಲಿ ಮುಂದಿದೆ.

ದೀದಿ ನಾಡಲ್ಲಿ ವರ್ಕೌಟ್ ಆಯ್ತಾ ಮೋದಿ ಗೇಮ್​ಪ್ಲಾನ್​​​..? ಆರಂಭಿಕ ಹಂತದಲ್ಲಿ ಭರ್ಜರಿ ಮುನ್ನಡೆ

ದೆಹಲಿಯ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪ್ರಮುಖವಾಗಿ ಹಿಂದಿ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡುವತ್ತ ಸಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ವೈಎಸ್​ಆರ್ ಕಾಂಗ್ರೆಸ್ 144 ಕ್ಷೇತ್ರದಲ್ಲಿ ಮುಂದಿದ್ದರೆ ತೃತೀಯ ರಂಗದ ರಚನೆಯ ಸರ್ಕಸ್​ನಲ್ಲಿರು ಟಿಡಿಪಿ 31ರಲ್ಲಿ ಮುನ್ನಡೆ ಸಾಧಿಸಿದೆ.

ಕರ್ನಾಟಕದಲ್ಲಿ ಬಿಜೆಪಿ 22 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 5 ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆ ಸಾಧಿಸಿದ್ದಾರೆ. ಮೈಸೂರಿನಲ್ಲಿ ಪ್ರತಾಪ್ ಸಿಂಹ ಹಿಂದೆ ಬಿದ್ದಿದ್ದು ಹಾಸನದಲ್ಲಿ ಪ್ರಜ್ವಲ್​​ ರೇವಣ್ಣ ಗೆಲುವು ಬಹುತೇಕ ಖಚಿತವಾಗಿದೆ.ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್​​.ಮುನಿಯಪ್ಪ ಹಿನ್ನಡೆಯಲ್ಲಿದ್ದಾರೆ.

ABOUT THE AUTHOR

...view details