ಕರ್ನಾಟಕ

karnataka

ETV Bharat / briefs

ಫೈವ್​ ಅವರ್ ಕೌಂಟ್: ಸೋಲಿನತ್ತ ದಿಗ್ಗಜ ನಾಯಕರು...! ಮಹಾಫಲಿತಾಂಶದಲ್ಲಿ ಯುಪಿಎಗೆ ಭಾರಿ ಹಿನ್ನಡೆ - ಲೋಕಸಭಾ ಚುನಾವಣೆ

ಮೋದಿ ಸರ್ಕಾರವನ್ನು ಕೆಳಗಿಸಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್​ಗೆ ತೀವ್ರ ಮುಖಭಂಗವಾಗಿದ್ದು ಸದ್ಯ 85 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

ಫೈವ್​ ಅವರ್ ಕೌಂಟ್

By

Published : May 23, 2019, 1:14 PM IST

ನವದೆಹಲಿ/ಬೆಂಗಳೂರು:ಲೋಕಸಮರ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದು ಬಿಜೆಪಿ ಹನ್ನೆರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು 327 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮೋದಿ ಸರ್ಕಾರವನ್ನು ಕೆಳಗಿಸಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್​ಗೆ ತೀವ್ರ ಮುಖಭಂಗವಾಗಿದ್ದು ಸದ್ಯ 85 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

ರಾಜಸ್ಥಾನದ ಎಲ್ಲ ಕ್ಷೇತ್ರದಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಭರ್ಜರಿ ಗೆಲುವಿನತ್ತ ಸಾಗಿದೆ.

ಕರ್ನಾಟಕದ 28 ಕ್ಷೇತ್ರದಲ್ಲಿ ಮೂರು ಬಿಜೆಪಿ ಪಾಲಾಗಿದ್ದು ಮೈತ್ರಿ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿ, ಹಾವೇರಿಯಲ್ಲಿ ಶಿವಕುಮಾರ ಉದಾಸಿ ಹಾಗೂ ಉತ್ತರ ಕನ್ನಡದಲ್ಲಿ ಅನಂತ್​ ಕುಮಾರ್​ ಹೆಗ್ಡೆ ಗೆದ್ದಿದ್ದಾರೆ. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭರ್ಜರಿ ಜಯ ಸಾಧಿಸಿದ್ದಾರೆ.

ಇತ್ತ ತುಮಕೂರಿನಲ್ಲಿ ಹೆಚ್​​.ಡಿ.ದೇವೇಗೌಡ ಹಾಗೂ ಕೋಲಾರದಲ್ಲಿ ಕೆ.ಹೆಚ್​.ಮುನಿಯಪ್ಪ ಸೋಲಿನತ್ತ ಮುಖ ಮಾಡಿದ್ದಾರೆ.

ABOUT THE AUTHOR

...view details