ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ತಂಡ ಹಾಗೂ ಕೊಹ್ಲಿಗೆ ಶುಭವಾಗಲಿ ಎಂದು ಭಾರತ ತಂಡದ ಜರ್ಸಿ ತೊಟ್ಟು ಜರ್ಮನಿಯ ಫುಟ್ಬಾಲ್ ತಾರೆ ಥಾಮಸ್ ಮುಲ್ಲರ್ ಟ್ವಿಟರ್ನಲ್ಲಿ ಶುಭ ಕೋರಿದ್ದಾರೆ.
ಫುಟ್ಬಾಲ್ ಪ್ರೇಮಿಯಾಗಿರುವ ಕೊಹ್ಲಿ ಹಲವು ಬಾರಿ ಡೀ ಮನ್ಸ್ಶಾಫ್ಟ್ ತಂಡದ ಆಭಿಮಾನಿಯಾಗಿದ್ದು, 2016ರ ಯೂರೋ ಕಪ್ ಸಂದರ್ಭದಲ್ಲಿ ಮುಲ್ಲರ್ ತಂಡಕ್ಕೆ ಶುಭ ಕೋರಿದ್ದರು.
ಇದೀಗ ಜರ್ಮನಿಯ ಫಾರ್ವರ್ಡರ್ ಭಾರತ ತಂಡದ ಜರ್ಸಿ ತೊಟ್ಟು ವಿಶ್ವಕಪ್ನಲ್ಲಿ ಭಾಗವಹಿಸುವ ಎಲ್ಲ ತಂಡಗಳಿಗೂ ಶುಭವಾಗಲಿ ಎಂದಿದ್ದಾರೆ. ಅಲ್ಲದೆ ಭಾರತದ ನಾಯಕ ವಿರಾಟ್ ಕೊಹ್ಲಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಕೊಹ್ಲಿ ನಮ್ಮ ತಂಡಕ್ಕೆ ಹಲವು ಬಾರಿ ಬೆಂಬಲ ನೀಡಿದ್ದಾರೆ. ಹಾಗಾಗಿ ತಾವೂ ಭಾರತ ಹಾಗೂ ನಾಯಕ ಕೊಹ್ಲಿಗೆ ಬೆಂಬಲ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.
ಕೊಹ್ಲಿ ಇಂಗ್ಲೆಂಡ್ಗೆ ತೆರಳಿದ ನಂತರ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ರನ್ನ ಭೇಟಿ ಮಾಡಿದ್ದರು. ಇದಲ್ಲದೆ ಕಳೆದ ವರ್ಷ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫುಟ್ಬಾಲ್ ಆಟವನ್ನು ನೋಡುವಂತೆ ಮಾಡಿದ್ದ ಭಾವನಾತ್ಮಕ ವಿಡಿಯೋಗೆ ಸ್ಪಂದಿಸಿದ್ದ ಕೊಹ್ಲಿ, ಎಲ್ಲ ಆಟವನ್ನು ಗೌರವಿಸುವಂತೆ ಕೋರಿ ಸ್ನೇಹಿತನ ನೆರವಿಗೆ ನಿಂತಿದ್ದರು.