ಕರ್ನಾಟಕ

karnataka

ETV Bharat / bharat

ಹೈದರಾಬಾದ್​​ ರೀತಿ ಗುಜರಾತ್​​​ನಲ್ಲೂ ಮರ್ಯಾದಾ ಹತ್ಯೆ.. ಯುವತಿಯ ಅಣ್ಣನಿಂದ ಪ್ರಿಯಕರನ ಮೇಲೆ ಹಲ್ಲೆ, ಕೊಲೆ!

ತೆಲಂಗಾಣದ ಸರೂರ್‌ನಗರದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಮರ್ಯಾದಾ ಹತ್ಯೆ ಪ್ರಕರಣದ ರೀತಿಯಲ್ಲೇ ಗುಜರಾತ್​​ನಲ್ಲೂ ಯುವಕನೊಬ್ಬನ ಹತ್ಯೆ ಮಾಡಲಾಗಿದೆ.

By

Published : May 12, 2022, 8:53 PM IST

YOUNG MAN KILLED OVER LOVE AFFAIR IN RAJKOT
YOUNG MAN KILLED OVER LOVE AFFAIR IN RAJKOT

ಅಹಮದಾಬಾದ್​​(ಗುಜರಾತ್​​​):ಅನ್ಯ ಜಾತಿಯ ಹುಡುಗನ ಮದುವೆಯಾಗಿದ್ದಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್​​ನಲ್ಲಿ ಆತನ ಕೊಲೆ ಮಾಡಿರುವ ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೇ ಗುಜರಾತ್​​ನಲ್ಲೂ ಇಂತಹದೊಂದು ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಸಹೋದರಿಯ ಪ್ರಿಯಕರನ ಮೇಲೆ ಸಹೋದರನೋರ್ವ ಅಮಾನುಷವಾಗಿ ಥಳಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ. ಗುಜರಾತ್​ನ ರಾಜ್​​ಕೋಟ್​​​ನಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಯುವಕ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಸಹೋದರ ಸೇರಿದಂತೆ ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾಗಿರುವ 22 ವರ್ಷದ ಯುವಕ ನಿನ್ನೆ ಇಂದು ಸಾವನ್ನಪ್ಪಿದ್ದಾನೆ. ಮೇ. 9ರಂದು ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ವೇಳೆ, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನ ಅಹಮದಾಬಾದ್​ ಸಿವಿಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಪೊಲೀಸ್​ ಅಧಿಕಾರಿ ಪ್ರವೀಣ್​ ಕುಮಾರ್ ಮೀನಾ ತಿಳಿಸಿದ್ದಾರೆ. ಯುವಕ ಸಾವಿನ ಬೆನ್ನಲ್ಲೇ ಕೊಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿ ಶಾಕಿರ್ ಹಾಗೂ ಆತನ ಸ್ನೇಹಿತರನ್ನ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಕ್ಕಿನ ಮರಿ ಎಂದು ಚಿರತೆ ಮರಿ ಮನೆಗೆ ಹೊತ್ತು ತಂದ ಬಾಲಕ.. ಮುಂದೇನಾಯ್ತು!?

ಪೊಲೀಸ್ ಅಧಿಕಾರಿ ತಿಳಿಸಿರುವ ಪ್ರಕಾರ ಒಂದೇ ಪ್ರದೇಶದಲ್ಲಿ ವಾಸವಾಗಿದ್ದ ಯುವಕ-ಯುವತಿ ಪ್ರೇಮ ಸಂಬಂಧ ಹೊಂದಿದ್ದರು. ಈ ಮಾಹಿತಿ ಯುವತಿಯ ಸಹೋದರನಿಗೆ ಗೊತ್ತಾಗಿದೆ. ಹೀಗಾಗಿ, ಮೇ 9ರಂದು ಯುವಕನೊಂದಿಗೆ ಜಗಳವಾಡಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ತದನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆ ಬೆನ್ನಲ್ಲೇ ಯುವತಿ ಕೂಡ ತನ್ನ ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಹೇಳಲಾಗ್ತಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ABOUT THE AUTHOR

...view details