ಕರ್ನಾಟಕ

karnataka

ETV Bharat / bharat

ಲವರ್ ಭೇಟಿ ಮಾಡಲು ಹೋಗಿದ್ದವನ ತಲೆ ಬೋಳಿಸಿ, ಮೆರವಣಿಗೆ ಮಾಡಿದ ಜನ - ಬಿಹಾರದ ಪಾಟ್ನಾದ ವೈರಲ್ ವಿಡಿಯೋ

ಯುವಕನೊಬ್ಬ ಮಧ್ಯರಾತ್ರಿಯಲ್ಲಿ ತನ್ನ ಲವರ್​ ಭೇಟಿ ಮಾಡಲು ತೆರಳಿದ್ದ ವೇಳೆ ಸ್ಥಳೀಯರು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಲವರ್ ಭೇಟಿ ಮಾಡಲು ಹೋಗಿದ್ದವನ ತಲೆ ಬೋಳಿಸಿ, ಮೆರವಣಿಗೆ ಮಾಡಿದ ಜನ
ಲವರ್ ಭೇಟಿ ಮಾಡಲು ಹೋಗಿದ್ದವನ ತಲೆ ಬೋಳಿಸಿ, ಮೆರವಣಿಗೆ ಮಾಡಿದ ಜನ

By

Published : Aug 24, 2021, 8:49 PM IST

ಪಾಟ್ನಾ(ಬಿಹಾರ): ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರಿಯತಮೆ ಭೇಟಿಯಾಗಲು ತೆರಳಿದ್ದ ವೇಳೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ, ತಲೆ ಬೋಳಿಸಿರುವ ಘಟನೆ ರೋಹ್ಟಾಸ್​ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತಿಲೋತು ಪ್ರದೇಶದ ಭಡೋಖರಾದಲ್ಲಿ ಯುವಕ ಗೋರಖ್​ ಕುಮಾರ್​​, ಮಧ್ಯರಾತ್ರಿ ತನ್ನ ಪ್ರಿಯತಮೆ ಭೇಟಿ ಮಾಡಲು ತೆರಳಿದ್ದ. ಈ ವೇಳೆ ಗ್ರಾಮಸ್ಥರು ಆತನಿಗೆ ಥಳಿಸಿ, ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಜಾತಲಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಪ್ರಾಣ ಬಿಟ್ಟ ಐವರು ಬಾಲಕಿಯರು!

ವೈರಲ್ ವಿಡಿಯೋ ಆಧರಿಸಿರುವ ಪೊಲೀಸರು, ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಎಫ್​ಐಆರ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details