ನವದೆಹಲಿ:ವಾಯುಮಾಲಿನ್ಯದಿಂದಾಗಿ ಈ ವರ್ಷವೂ ರಾಷ್ಟ್ರ ರಾಜಧಾನಿ ಸುದ್ದಿಯಲ್ಲಿತ್ತು. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (AQLI) ನ 2023 ರ ಅಧ್ಯಯನದ ಪ್ರಕಾರ, ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂದು ದಾಖಲಾಗಿದೆ. ರಾಷ್ಟ್ರೀಯ ರಾಜಧಾನಿಯು ಇಂಡೋ - ಗಂಗಾ ಬಯಲು ಪ್ರದೇಶದಾದ್ಯಂತ ಕೆಂಪು ಚುಕ್ಕೆಗಳ ಸಮೂಹಗಳೊಂದಿಗೆ ವಿವಿಧ ಸ್ಥಳಗಳಲ್ಲಿ ನಿರಂತರವಾಗಿ ಅಪಾಯಕಾರಿ ವರ್ಗದಲ್ಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 27 ರಿಂದ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 200 ಪಾಯಿಂಟ್‌ಗಳಿಗಿಂತ ಹೆಚ್ಚಾಗಿದೆ. ಈ ವರ್ಷದ ನವೆಂಬರ್ನಲ್ಲಿ ರಾಜಧಾನಿ ನವದೆಹಲಿಯ ವಾತಾವರಣ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿತ ಕಂಡಿತ್ತು. ಇದು ನವೆಂಬರ್ 12, 2021 ರಂದು ದಾಖಲಾದ ಹಿಂದಿನ ಗರಿಷ್ಠ 471 ಅಂಕಗಳನ್ನು ಮೀರಿತ್ತು.
ರಾಷ್ಟ್ರೀಯ ರಾಜಧಾನಿಗೆ ವಾಯು ಸಂಕಟ:ದೆಹಲಿಯ ನಿರ್ಣಾಯಕ ಗಾಳಿಗೆ ಕೊಡುಗೆ ನೀಡುವ ಎರಡು ದೊಡ್ಡ ಅಂಶಗಳನ್ನು ತಜ್ಞರು ಈಗಾಗಲೇ ಗಮನಿಸಿದ್ದಾರೆ. ಅವುಗಳೆಂದ್ರೆ ನಿರ್ಮಾಣ ಚಟುವಟಿಕೆ ಮತ್ತು ಸಾರಿಗೆ. 2021 ರಲ್ಲಿ, ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈತರು ಭತ್ತದ ಹುಲ್ಲು ಸುಡುತ್ತಿದ್ದರು. ಆದರೆ ರಾಜಧಾನಿಯ ವಾಯುಮಾಲಿನ್ಯಕ್ಕೆ ಇದೊಂದೇ ಕಾರಣವಲ್ಲ ಎಂದು ಸುಪ್ರೀಂ ಕೋರ್ಟ್ ಘೋಷಿಸಿತ್ತು. ಬದಲಿಗೆ, ನಿರ್ಮಾಣ ಚಟುವಟಿಕೆಗಳು, ಕೈಗಾರಿಕಾ ಹೊರಸೂಸುವಿಕೆ ಮತ್ತು ವಾಹನ ಮಾಲಿನ್ಯದಂತಹ ಅಂಶಗಳು ಪ್ರಮುಖ ಕಾರಣಗಳಾಗಿವೆ ಎಂಬ ಅಂಶವನ್ನು ಕಂಡುಕೊಳ್ಳಲಾಗಿತ್ತು. ಹಳೆಯ ವಾಹನಗಳು ದೆಹಲಿಯಲ್ಲಿ ಹೊರಸೂಸುವ ಕಣಗಳನ್ನು (particulate matter) 4.3 ಪ್ರತಿಶತದಷ್ಟು ಬಿಡುಗಡೆ ಮಾಡುತ್ತವೆ ಎಂದು ತಜ್ಞರು ಗಮನ ಸೆಳೆದಿದ್ದಾರೆ. BS-I ಡೀಸೆಲ್ ಕಾರು (2000 ಪೂರ್ವ) BS-VI ಡೀಸೆಲ್ ವಾಹನಕ್ಕಿಂತ 31 ಪಟ್ಟು ಹೆಚ್ಚು particulate matter ಹೊರಸೂಸುತ್ತದೆ. ನಿರ್ಮಾಣ ಮತ್ತು ಕೈಗಾರಿಕಾ ಹೊರಸೂಸುವಿಕೆ ರಾಜಧಾನಿಯ ವಾತಾವರಣದಲ್ಲಿ ಹಾನಿಕಾರಕ ಮಾಲಿನ್ಯಕಾರಕಗಳಿಗೆ ಮತ್ತೊಂದು ಕಾರಣವಾಗಿದೆ. ನೆರೆಹೊರೆಗಳಲ್ಲಿ ಸುಡುವ ತೆರೆದ ಕಸವು ದೆಹಲಿಯ ವಾಯು ಸಂಕಟಕ್ಕೆ ಮೂರನೇ ಸ್ಥಾನದಲ್ಲಿದೆ.
ವಾಯುಮಾಲಿನ್ಯ ತಡೆಯುವುದಕ್ಕೆ ಉಪಾಯವೇನು?:ತಜ್ಞರ ಪ್ರಕಾರ, ಮಾಲಿನ್ಯದ ಮಟ್ಟ ಕಡಿಮೆ ಮಾಡಲು ಕೆಲವು ದೀರ್ಘಾವಧಿಯ ಮಾರ್ಗಗಳಿವೆ. ಪ್ರತಿ ಮನೆಗೆ ನಿರ್ದಿಷ್ಟ ವಾಹನಗಳ ಮೇಲೆ ಸೀಲಿಂಗ್ ಮಾಡುವುದು. ಡೀಸೆಲ್ ವಾಹನ ನೋಂದಣಿ ನಿಯಂತ್ರಿಸುವುದು. ಸಾರ್ವಜನಿಕ ಸಾರಿಗೆಗಾಗಿ CNG ಎಂಜಿನ್‌ಗಳನ್ನು ಬಳಸುವುದು. ಹಳೆಯ ವಾಣಿಜ್ಯ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುವುದು. ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವುದು ಮತ್ತು ನಿಯಂತ್ರಿಸುವುದು. ಕಸ ನಿರ್ವಹಣೆ ಮತ್ತು ಪಟಾಕಿಗಳನ್ನು ನಿಷೇಧಿಸುವುದು. ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮುಖ ಕಾರಣಗಳೆಂದ್ರೆ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ.
ಚಳಿಗಾಲದ ತಿಂಗಳುಗಳಲ್ಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ದೊಡ್ಡ ಪ್ರಮಾಣದ ಹುಲ್ಲು ಸುಡುತ್ತಾರೆ. ಹೀಗಾಗಿ ದಟ್ಟವಾದ ಹೊಗೆ ದೆಹಲಿ-ರಾಷ್ಟ್ರೀಯ ರಾಜಧಾನಿ (NCR) ಪ್ರದೇಶವನ್ನು ಆವರಿಸುತ್ತದೆ. ಸಂಶೋಧನೆಯ ಪ್ರಕಾರ, ಬೆಳೆ ಸುಡುವಿಕೆಯು ಸುಮಾರು 149 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಮತ್ತು ಒಂಬತ್ತು ಮಿಲಿಯನ್ ಟನ್ ಕಾರ್ಬನ್ ಮಾನಾಕ್ಸೈಡ್ ಅನ್ನು ಬಿಡುಗಡೆ ಮಾಡಿತ್ತದೆಯಂತೆ. ಮತ್ತೊಂದೆಡೆ, ಪಟಾಕಿಗಳು ಸಹ ದೀರ್ಘಕಾಲಿಕ ಸಮಸ್ಯೆಗೆ ಕೊಡುಗೆ ನೀಡುತ್ತವೆ ಎಂದು ತಿಳಿದು ಬಂದಿದೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ:ವಾಯು ಮಾಲಿನ್ಯದ ಭೀತಿ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಪ್ರಾಥಮಿಕವಾಗಿ ದೆಹಲಿ ಸರ್ಕಾರವು ಮರಗಳನ್ನು ಸಂರಕ್ಷಿಸಲು ಮತ್ತು ನೆಡಲು ನೀತಿಯನ್ನು ಪರಿಚಯಿಸಿದೆ. ನಗರದಲ್ಲಿ ಆ್ಯಂಟಿ ಸ್ಮಾಗ್ ಗನ್‌ಗಳು ಮತ್ತು ಸ್ಮಾಗ್ ಟವರ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಗಾಳಿಯ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಬೆಖೆ ಸುಡುವಿಕೆಯನ್ನು ತಡೆಗಟ್ಟುವುದು ಸಹ ಒಂದು ಪ್ರಮುಖ ಅಂಶವಾಗಿದೆ.
ಟರ್ಬೊ ಹ್ಯಾಪಿ ಸೀಡರ್ ಅನ್ನು ಖರೀದಿಸಲು ರೈತರಿಗೆ ಸಹಾಯಧನವನ್ನು ನೀಡಲಾಗುತ್ತದೆ. ಇದು ಟ್ರ್ಯಾಕ್ಟರ್‌ಗಳಲ್ಲಿ ಅಳವಡಿಸಲಾದ ಯಂತ್ರವಾಗಿದ್ದು, ಇದು ಕೋಲುಗಳನ್ನು ಕತ್ತರಿಸಿ ಕಿತ್ತುಹಾಕುವ ಮತ್ತು ಹುಲ್ಲು ಸುಡುವ ಅಗತ್ಯವನ್ನು ನಿವಾರಿಸುತ್ತದೆ. 'carrot and stick' ನೀತಿಯನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳನ್ನು ಸುಪ್ರೀಂ ಕೋರ್ಟ್ ಹೇಳಿದೆ. ಈ ಪದ್ಧತಿಯನ್ನು ತ್ಯಜಿಸಿ ಇತರ ಬೆಳೆಗಳಿಗೆ ಬದಲಾಯಿಸುವಂತೆ ರೈತರ ಮನವೊಲಿಸುತ್ತದೆ. ವಾಹನಗಳ ಮೇಲೆ ಬೆಸ - ಸಮ ನಿರ್ಬಂಧಗಳ ಬಗ್ಗೆ ದೆಹಲಿ ಸರ್ಕಾರವು ಅದರ ಪರಿಣಾಮಕಾರಿತ್ವದ ಬಗ್ಗೆ ಸಂದೇಹ ಹೊಂದಿದೆ. ದೆಹಲಿ ಸರ್ಕಾರವು ತಮ್ಮ ಜನತೆಗೆ ಮುಂಜಾನೆ ಹೊರಗೆ ಹೋಗುವುದನ್ನು ಮತ್ತು ಸಂಜೆಯ ವಾಕಿಂಗ್, ಜಾಗಿಂಗ್, ಓಟ ಮತ್ತು ಕಳಪೆ ಎಕ್ಯೂಐ ಸಮಯದಲ್ಲಿ ದೈಹಿಕ ವ್ಯಾಯಾಮ ಮಾಡುವುದನ್ನು ತಪ್ಪಿಸಲು ಸಲಹೆ ನೀಡಿದೆ.
ಸುಪ್ರೀಂಕೋರ್ಟ್ ಅವಲೋಕನಗಳು..: ಈ ವರ್ಷದ ಆರಂಭದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಪ್ರತಿ ಚಳಿಗಾಲದಲ್ಲಿ ಜನರು ಒಂದೇ ರೀತಿಯ ಸನ್ನಿವೇಶವನ್ನು ಎದುರಿಸದಂತೆ ನ್ಯಾಯಾಂಗ ಮೇಲ್ವಿಚಾರಣೆ ಅಗತ್ಯವನ್ನು ಒತ್ತಿಹೇಳಿತು. "ಮುಂದಿನ ಚಳಿಗಾಲದಲ್ಲಿ ಸ್ವಲ್ಪ ಉತ್ತಮವಾಗಲು ನಾವು ಕನಿಷ್ಠ ಪ್ರಯತ್ನ ಮಾಡೋಣ" ಎಂದು ಪೀಠ ಹೇಳಿದೆ.
- 2023 ಹಿನ್ನೋಟ: ಪಳೆಯುಳಿಕೆ ಇಂಧನ ಬಳಕೆ-ಭಾರತಕ್ಕೆ ನಿರಾಳತೆ ತಂದ ದುಬೈ COP28 ಸಭೆ
- ವರ್ಷದ ಕ್ರಿಕೆಟ್ ನೆನಪು: ಭಾರತಕ್ಕೆ ವಿಶ್ವಕಪ್ ಸೋಲಿನ ಕಹಿ.. ವಿಶ್ವಾದ್ಯಂತ ಚೆಂಡು - ದಾಂಡಿಗೆ ಹೆಚ್ಚಿದ ಮನ್ನಣೆ
- ವರ್ಷದ ನೆನಪು: ಉತ್ತರಾಖಂಡದ ಸಿಲ್ಕ್ಯಾರಾ ಸೇತುವೆ ರಕ್ಷಣಾ ಕಾರ್ಯ 2023ರ ಮಹತ್ತರ ಸಾಧನೆ
- 2023ರಲ್ಲಿ ಹೆಚ್ಚು ಡಿಲೀಟ್ ಆದ ಆ್ಯಪ್ ಇನ್ಸ್ಟಾಗ್ರಾಂ: ಈ ವರ್ಷ ಏರಿಳಿತ ಕಂಡ ಆ್ಯಪ್ಗಳ ಮಾಹಿತಿ ಹೀಗಿದೆ!
- 2023ರ ಕಹಿ ಘಟನೆ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತ