ಹೈದರಾಬಾದ್: 2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಪುರುಷ/ಮಹಿಳೆಯರ ಪಟ್ಟಿ ಇದೀಗ ರಿಲೀಸ್ ಆಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆವೊಂದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ 8ನೇ ಸ್ಥಾನ ಪಡೆಕೊಂಡಿದ್ದು, ಅನೇಕ ದಿಗ್ಗಜ ಸೆಲಿಬ್ರಿಟಿಗಳನ್ನ ಹಿಂದಿಕ್ಕಿದ್ದಾರೆ.
ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲನೇ ಸ್ಥಾನ ಪಡೆದುಕೊಂಡಿದ್ದು, ಉದ್ಯಮಿ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ನ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 12ನೇ ಸ್ಥಾನದಲ್ಲಿದ್ದು, ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡನ್ 20ನೇ ಸ್ಥಾನದಲ್ಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ 17ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.ನಟ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಕೂಡ 20ರ ಪಟ್ಟಿಯಲ್ಲಿದ್ದಾರೆ. ಬ್ರಿಟಿಷ್ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು ಅದಕ್ಕಾಗಿ 38 ದೇಶಗಳ 42,000 ಕ್ಕಿಂತಲೂ ಅಧಿಕ ಜನರನ್ನ ಸಮೀಕ್ಷೆಗೊಳಪಡಿಸಿದೆ.