ಕರ್ನಾಟಕ

karnataka

ETV Bharat / bharat

ಹೈಫೈ ಇಂಗ್ಲಿಷ್​ ಮಾತಾಡುವ ಭಿಕ್ಷುಕಿಗೆ ಮುಕ್ತಿ.. ವಿಡಿಯೋ ವೈರಲ್​ ಆಗ್ತಿದ್ದಂತೆ ಕುಟುಂಬ ಸೇರಿದ ಮಹಿಳೆ!

ಗಂಡನ ಮನೆಯವರು ಹೊರ ಹಾಕುತ್ತಿದ್ದಂತೆ ವಾರಣಾಸಿಯ ಅಸ್ಸಿ ಘಾಟ್​​ನಲ್ಲಿ ಭಿಕ್ಷೆ ಬೇಡುತ್ತ ಜೀವನ ನಡೆಸುತ್ತಿದ್ದ ಮಹಿಳೆಯೋರ್ವಳು ಕೊನೆಗೂ ಕುಟುಂಬಸ್ಥರನ್ನ ಸೇರಿಕೊಂಡಿದ್ದಾಳೆ. ಈಕೆ ಇಂಗ್ಲಿಷ್​​, ಹಿಂದಿಯಲ್ಲಿ ಮಾತನಾಡುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು..

By

Published : Nov 30, 2021, 7:17 PM IST

Women begging in English
Women begging in English

ಕರ್ನೂಲ್​​(ಆಂಧ್ರಪ್ರದೇಶ) :ಜೀವನ ಎಂಬ ಚದುರಂಗದಾಟದಲ್ಲಿ ಏನಾಗುತ್ತದೆಂದು ಊಹೇ ಮಾಡುವುದು ಅಸಾಧ್ಯ. ಅದಕ್ಕೆ ಸೂಕ್ತ ಉದಾಹರಣೆ ಎಂಬ ರೀತಿಯಲ್ಲಿ ಬಿಎಸ್ಸಿ ಕಂಪ್ಯೂಟರ್​​ ಸೈನ್ಸ್​​ ಮುಗಿಸಿದ್ರೂ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೋರ್ವಳ ಈ ವಿಡಿಯೋ. ಹಿಂದಿ-ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಭೀಕ್ಷಕಿಯೋರ್ವಳು ಉತ್ತರಪ್ರದೇಶದ ಬನಾರಸ್‌ ಗಂಗಾ ನದಿ ದಡದಲ್ಲಿ ಜೀವನ ನಡೆಸುತ್ತಿದ್ದಳು.

ಭಿಕ್ಷುಕಿ ನಿರರ್ಗಳವಾಗಿ ಹಿಂದಿ ಮತ್ತು ಇಂಗ್ಲಿಷ್​ ಭಾಷೆ ಮಾತನಾಡ್ತಿದ್ದರಿಂದ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಇದರ ಬೆನ್ನಲ್ಲೇ ಕುಟುಂಬಸ್ಥರನ್ನ ಸೇರಿಕೊಂಡಿದ್ದಾಳೆ. ಇದಕ್ಕೆ ಸಹಕಾರಿಯಾಗಿದ್ದು ವೈರಲ್​ ವಿಡಿಯೋ ಎಂಬುದು ಗಮನಾರ್ಹ ಸಂಗತಿ.

ಕುಟುಂಬ ಸೇರಿದ ವಾರಣಾಸಿಯ ಭಿಕ್ಷುಕಿ

ಕಳೆದ ಕೆಲ ವರ್ಷಗಳ ಹಿಂದೆ ಆಂಧ್ರಪ್ರದೇಶದ ಕರ್ನೂಲ್ ಮೂಲದ ಸ್ವಾತಿ ಎಂಬಾಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಇದಾದ ಬಳಿಕ ಮೂರು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ಸಹ ನೀಡಿದ್ದಳು. ಆದರೆ, ಅನಾರೋಗ್ಯದಿಂದ ಮಗು ಸಾವನ್ನಪ್ಪಿತ್ತು.

ಇದರ ಬೆನ್ನಲ್ಲೇ ಪಾರ್ಶ್ವವಾಯು ರೋಗಕ್ಕೆ ತುತ್ತಾದ ಕಾರಣ ಬಲಗೈ ಕಳೆದುಕೊಂಡಿದ್ದಳು. ಹೀಗಾಗಿ, ಗಂಡನ ಮನೆಯವರು ಹೊರ ಹಾಕಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡು, ಮೋಕ್ಷ ಪಡೆಯುವ ಸಲುವಾಗಿ ಕಾಶಿಗೆ ಪ್ರಯಾಣ ಬೆಳೆಸುತ್ತಾಳೆ.

ಇದನ್ನೂ ಓದಿರಿ:ಕಂಪ್ಯೂಟರ್​ ಸೈನ್ಸ್​​ ಪದವೀಧರೆ ಈ ಭಿಕ್ಷುಕಿ.. ನಿರರ್ಗಳವಾಗಿ ಹಿಂದಿ, ಇಂಗ್ಲಿಷ್​ ಮಾತನಾಡುವ ನಿರಾಶ್ರಿತೆ - ವಿಡಿಯೋ ವೈರಲ್​

ಕಾಶಿಯ ಅಸ್ಸಿ ಘಾಟ್​ಗೆ ಬರುತ್ತಿದ್ದಂತೆ ವ್ಯಕ್ತಿಯೋರ್ವನ ಪರಿಚಯವಾಗುತ್ತದೆ. ಹೀಗಾಗಿ, ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಆತನೊಂದಿಗೆ ಮದುವೆ ಮಾಡಿಕೊಳ್ಳುತ್ತಾಳೆ. ಅವರಿಗೆ ಹೆಣ್ಣು ಮಗು ಜನಸಿದೆ. ಅದು ಅನಾರೋಗ್ಯದಿಂದ ಸಾವನ್ನಪುತ್ತದೆ. ಅಂದಿನಿಂದ ಸ್ವಾತಿ ವಾರಣಾಸಿಯ ಅಸ್ಸಿ ಘಾಟ್​ ಬಳಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದಳು.

ವೈರಲ್​ ವಿಡಿಯೋದಿಂದ ಕುಟುಂಬ ಸೇರಿಕೊಂಡ ಭಿಕ್ಷುಕಿ

ವಾರಣಾಸಿಯ ಅಸ್ಸಿ ಘಾಟ್​​ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆ ನಿರರ್ಗಳವಾಗಿ ಇಂಗ್ಲಿಷ್​, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ, ಕೆಲವರು ಆಕೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗಿದೆ.

ತಕ್ಷಣವೇ ಸ್ವಾತಿಯನ್ನ ಹುಡುಕಿಕೊಂಡು ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ತನ್ನ ಸಹೋದರ ಮತ್ತು ಕುಟುಂಬದ ಸದಸ್ಯರನ್ನ ಕಂಡ ಸ್ವಾತಿಗೆ ಆನಂದವಾಗಿದೆ. ಇದೀಗ ನಾಲ್ಕು ವರ್ಷಗಳ ನಂತರ ಮನೆಗೆ ಮರಳಿದ್ದಾಳೆ.

ABOUT THE AUTHOR

...view details