ಕರ್ನಾಟಕ

karnataka

ETV Bharat / bharat

ಮಕ್ಕಳನ್ನು ಕಟ್ಟಿಹಾಕಿದ ತಾಯಿ, ತಲೆ ಕೆಳಗಾಗಿ ನೇತು ಹಾಕಿದ ವ್ಯಕ್ತಿ​: ಪೊಲೀಸರಿಂದ ತನಿಖೆ - social media platform

ಮಕ್ಕಳು ಚೇಷ್ಟೆ ಮಾಡುತ್ತಿದ್ದು, ಮನೆಯಿಂದ ಹೊರಹೋಗದಂತೆ ತಡೆಯಲು ಮಕ್ಕಳನ್ನು ಕಟ್ಟಿಹಾಕಿದ್ದೆ ಎಂದು ಮಹಿಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ತಿಳಿಸಿದ್ದಾಳೆ.

A neighbour hangs children upside down and photographed them, video hit social media platform
ಮಕ್ಕಳನ್ನು ಕಟ್ಟಿಹಾಕಿದ ತಾಯಿ, ತಲೆ ಕೆಳಗಾಗಿ ನೇತು ಹಾಕಿದ ಶೂ ಧರಿಸಿದ ಅಂಕಲ್​: ಪೊಲೀಸರಿಂದ ತನಿಖೆ

By

Published : Oct 27, 2021, 8:18 AM IST

ಜೈಪುರ(ರಾಜಸ್ಥಾನ):ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ತಲೆಕೆಳಗಾಗಿ ನೇತು ಹಾಕಿ ವಿಕೃತಿ ಮೆರೆದಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಮುರ್ಲಿಪುರದಲ್ಲಿ ನಡೆದಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆ ತನ್ನ ಮಕ್ಕಳನ್ನು ಸರಪಳಿಯಿಂದ ಕಟ್ಟಿಹಾಕಿದ್ದು, ನಂತರ ಯಾರೋ ಅಪರಿಚಿತ ವ್ಯಕ್ತಿಗಳು ಮನೆಗೆ ಧಾವಿಸಿ, ಮಕ್ಕಳನ್ನು ತಲೆ ಕೆಳಗಾಗಿ ನೇತುಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳ ರಕ್ಷಣೆ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ಲಾಗಿದ್ದು, ಆ ವಿಡಿಯೋದ ಪ್ರಕಾರ ಸುಮಾರು 6 ಮತ್ತು 8 ವರ್ಷದ ಇಬ್ಬರು ಮಕ್ಕಳನ್ನು ತಲೆಕೆಳಗಾಗಿ ನೇತುಹಾಕಲಾಗಿದೆ. ಈ ವಿಡಿಯೋ ಆಧರಿಸಿ ಸ್ಥಳಕ್ಕೆ ಧಾವಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥರಾದ ಸಂಗೀತಾ ಬೆನಿವಾಲ್ ಮಹಿಳೆಗೆ ಕೌನ್ಸೆಲಿಂಗ್ ಮಾಡಿದ್ದಾರೆ.

'ಮಕ್ಕಳು ಮಾಡೋ ಚೇಷ್ಟೆಗೆ ಕಟ್ಟಿ ಹಾಕಿದ್ದು':ಮಕ್ಕಳು ಚೇಷ್ಟೆ ಮಾಡುತ್ತಿದ್ದು, ನಾನು ನನ್ನ ಪತ್ನಿಗೆ ಊಟ ಕೊಡಲು ಹೊರಗೆ ಹೋಗಬೇಕಾಗಿತ್ತು. ಈ ವೇಳೆ ಅವರನ್ನು ಹಗ್ಗದಿಂದ ಕಟ್ಟಿಹಾಕಿ, ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದೆ ಎಂದು ಸಂಗೀತಾ ಬೆನಿವಾಲ್ ಮುಂದೆ ಹೇಳಿಕೆ ನೀಡಿದ್ದಾರೆ.

'ಶೂ ಹಾಕಿದ್ದ ಅಂಕಲ್': ತಾಯಿ ತಮ್ಮನ್ನು ಕಟ್ಟಿ ಹಾಕಿ ಹೊರಗೆ ಹೋದ ನಂತರ ಶೂ ಧರಿಸಿದ್ದ ಒಬ್ಬ ಅಂಕಲ್ ಮನೆಗೆ ಬಂದು ನಮ್ಮನ್ನು ತಲೆಕೆಳಗಾಗಿ ನೇತುಹಾಕಿದನು. ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿ, ವಿಡಿಯೋ ಸೆರೆಹಿಡಿದ ಎಂದು ಮಕ್ಕಳು ಅಧಿಕಾರಿಗಳಿಗೆ ಮಾಹಿತಿ ನೀಡಿವೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಮಕ್ಕಳ ಚೇಷ್ಟೆ:ಕೂಲಿ ಕೆಲಸ ಮಾಡುತ್ತಿದ್ದ ಈದಂಪತಿಗೆ ನಾಲ್ವರು ಮಕ್ಕಳಿದ್ದು, ಈಗ ಸುದ್ದಿಯಲ್ಲಿರುವ ಎರಡು ಮಕ್ಕಳು ಕೆಲವು ದಿನಗಳ ಹಿಂದೆ ಆಟವಾಡಲು ತೆರಳಿ, ಕಾಣೆಯಾಗಿದ್ದವು. ಈ ಕುರಿತು ಮುರ್ಲಿಪುರ ಪೊಲೀಸ್ ಠಾಣೆಯಲ್ಲೂ ಕೂಡಾ ಪ್ರಕರಣ ದಾಖಲಾಗಿತ್ತು. ಆದ್ದರಿಂದಲೇ ಮಹಿಳೆ 'ಈ ಕೃತ್ಯ' ನಡೆಸಿದ್ದಾಳೆ ಎಂದು ಹೇಳಲಾಗಿದೆ.

ಮಕ್ಕಳನ್ನು ಈ ರೀತಿಯಾಗಿ ಕಟ್ಟುವುದು ತಪ್ಪು. ಪೋಷಕರು ಈ ರೀತಿಯ ತಪ್ಪು ಮಾಡಬಾರದು. ಅದಕ್ಕಿಂತ ಹೆಚ್ಚಿನ ಆತಂಕಕಾರಿ ವಿಚಾರವೆಂದರೆ 'ಶೂ ಧರಿಸಿದ' ವ್ಯಕ್ತಿಯ ವಿಕೃತಿ ಎಂದು ಸಂಗೀತಾ ಬೆನಿಹಾಲ್ ಹೇಳಿದ್ದು, ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ... ಮದುವೆ ಮಾತು ಬಂದಾಗ ಯುವತಿ ಕೊಲೆಗೈದ!

ABOUT THE AUTHOR

...view details