ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಫೇಸ್​ಬುಕ್​​ ಗೆಳೆಯನಿಂದ ಅತ್ಯಾಚಾರ - ಉತ್ತರ ಪ್ರದೇಶ ಮಥುರಾ ನ್ಯೂಸ್​

ಸಬ್​ ಇನ್ಸ್​ಪೆಕ್ಟರ್​ ನೇಮಕಾತಿ ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖಾ ಕಾರ್ಯ ಆರಂಭ ಮಾಡಿದ್ದಾರೆ.

Woman raped in moving car
Woman raped in moving car

By

Published : Nov 25, 2021, 5:41 PM IST

ಮಥುರಾ(ಉತ್ತರ ಪ್ರದೇಶ):21 ವರ್ಷದ ಯುವತಿಯೋರ್ವಳ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಫೇಸ್​ಬುಕ್​ ಗೆಳೆಯನೋರ್ವ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಪ್ರಕರಣ ನಡೆದಿದೆ.

ಉತ್ತರ ಪ್ರದೇಶದ ಸಬ್​​ ಇನ್ಸ್​​ಪೆಕ್ಟರ್​​ ನೇಮಕಾತಿ ಪರೀಕ್ಷೆ ಮುಗಿಸಿ ಆಗ್ರಾದಿಂದ ಮಥುರಾಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯುವತಿಯನ್ನು ಕರೆದುಕೊಂಡು ಹೋಗಲು ಫೇಸ್​ಬುಕ್​​ ಸ್ನೇಹಿತನೋರ್ವ ಕಾರ್​ ಡ್ರೈವರ್​ ಆಗಿ ಆಗಮಿಸಿದ್ದ. ಆಕೆ ಕಾರಿನಲ್ಲಿ ಕುಳಿತುಕೊಂಡ ನಂತರ ಮತ್ತು ಬರುವ ಔಷಧಿ ಸಿಂಪಡನೆ ಮಾಡಿದ್ದಾನೆ. ಹೀಗಾಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಮೇಲೆ ದುಷ್ಕೃತ್ಯವೆಸಗಿ, ಅಲ್ಲಿಂದ ಪರಾರಿಯಾಗಿದ್ದಾನೆ.

ಯುವತಿಗೆ ಪ್ರಜ್ಞೆ ಬಂದಾಗ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದು ಗೊತ್ತಾಗಿದೆ. ಕೆಲವರ ಸಹಾಯದಿಂದ ಮನೆಗೆ ಬಂದಿರುವ ಯುವತಿ ಘಟನೆಗೆ ಸಂಬಂಧಿಸಿದಂತೆ ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ರೈತರ ಮುಂದೆ ತಲೆಬಾಗುತ್ತೇವೆ, ಭ್ರಷ್ಟಾಚಾರ ವಿಚಾರದಲ್ಲಿ ಯಾರೂ ನಮ್ಮ ಮೇಲೆ ಬೆರಳು ತೋರಿಸಿಲ್ಲ: ರಾಜನಾಥ್​ ಸಿಂಗ್​​

ಪ್ರಕರಣದ ಮಾಹಿತಿ ನೀಡಿರುವ ಪೊಲೀಸರು, ಹರಿಯಾಣದ ಪಲ್ವಾಲ್​ ಎಂಬಾತ ಯುವತಿಗೆ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಮೂಲಕ ಸ್ನೇಹಿತನಾಗಿದ್ದನು. ಆಕೆ ಪರೀಕ್ಷೆ ಬರೆಯಲು ಹೋಗಿದ್ದ ವೇಳೆ ಕಾರ್​ ಡ್ರೈವರ್​​ ಆಗಿ ತೆರಳಿದ್ದು, ಮರಳಿ ಬರುವಾಗ ಮತ್ತು ಬರುವ ಔಷಧಿ ಸಿಂಪಡನೆ ಮಾಡಿದ್ದಾನೆ. ಇದರ ಬೆನ್ನಲ್ಲೇ ದುಷ್ಕೃತ್ಯವೆಸಗಿ ಪರಾರಿಯಾಗಿದ್ದಾನೆಂದು ತಿಳಿಸಿದ್ದಾರೆ.

ಯುವತಿ ನೀಡಿರುವ ಹೇಳಿಕೆ ಆಧಾರದ ಮೇಲೆ ಈಗಾಗಲೇ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದ್ದು, ಸೆಕ್ಷನ್​ 376(ರೇಪ್) ಹಾಗೂ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿವೆ ಎಂದಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ವರದಿಗೋಸ್ಕರ ಕಾಯುತ್ತಿದ್ದೇವೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಶಿರೀಶ್ ಚಂದ್ರ ತಿಳಿಸಿದ್ದಾರೆ.

ABOUT THE AUTHOR

...view details