ಕರ್ನಾಟಕ

karnataka

By

Published : Oct 19, 2022, 8:04 AM IST

ETV Bharat / bharat

ಅಮೆರಿಕ TO ಭಾರತ.. ಪ್ರೀತಿಗಾಗಿ ಸಪ್ತಸಾಗರ ದಾಟಿ ಬಂದ ಯುವತಿ

ತನ್ನ ಪ್ರೀತಿಗಾಗಿ ಅಮೆರಿಕದ ಯುವತಿಯೊಬ್ಬರು ಪಶ್ಚಿಮಬಂಗಾಳಕ್ಕೆ ಹಾರಿ ಬಂದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಪರಿಚಯವಾಗಿ ಬಳಿಕ ಅದು ಪ್ರೀತಿಯಾಗಿದೆ. ಹೀಗಾಗಿ ಬಯಸಿದಾತನನ್ನು ಪಡೆಯಲು ಆ ಯುವತಿ ಮುಂದಾಗಿದ್ದಾರೆ.

america-in-search-of-love
ಪ್ರೀತಿಗಾಗಿ ಸಪ್ತಸಾಗರ ದಾಟಿ ಬಂದ ಪ್ರಿಯತಮೆ

ಮುರ್ಷಿದಾಬಾದ್(ಪಶ್ಚಿಮಬಂಗಾಳ): Love is blind, love at first sightಪ್ರೀತಿ-ಪ್ರೇಮ ಕುರಿತು ನೂರಾರು ವ್ಯಾಖ್ಯಾನಗಳನ್ನು ಕೇಳಿದ್ದೀರಿ ಮತ್ತು ಓದಿದ್ದೀರಿ.. ಆದ್ರೆ ಲೋಕವೇ ಹೇಳಿದ ಮಾತಿದು.. ವೇದದ ಸಾರವೇ ಕೇಳಿದು ಎಂಬಂತೆ ಎಲ್ಲೋ ಇರುವ ಯುವತಿ, ಇನ್ನೆಲ್ಲೋ ಇರುವ ಯುವಕನೊಂದಿಗೆ ಸ್ನೇಹ ಬೆಳೆಸಿ ನಂತರ ಅದು ಪ್ರೀತಿಯಾಗಿ ಚಿಗುರೊಡೆದು ಈಗ ಹೆಮ್ಮರವಾಗಿ ಬೆಳೆದಿದೆ. ಈ ಪ್ರೀತಿಯೇ ಆಕೆಯನ್ನು ಸಪ್ತಸಾಗರ ದಾಟಿ ಭಾರತದ ನೆಲಕ್ಕೆ ಕಾಲಿಡುವಂತೆ ಮಾಡಿದೆ.

ಹೌದು, ನಾವಿಲ್ಲಿ ಹೇಳ್ತಿರೋದು ಒಂದು ವಿಶಿಷ್ಟ ಲವ್​ ಸ್ಟೋರಿ ಬಗ್ಗೆ.. ಪ್ರೀತಿಗೆ ಯಾವುದೇ ಗಡಿಯ ಮಿತಿ ಇಲ್ಲ ಎಂಬ ಮಾತಿದೆ. ಅದು ಬಹುತೇಕ ಕಡೆ ಸಾಬೀತಾಗಿದೆ. ಇದೇ ರೀತಿ ಪಶ್ಚಿಮಬಂಗಾಳದ ಮುರ್ಷಿದಾಬಾದ್​ನ ತನ್ನ ಪ್ರಿಯತಮನನ್ನು ಹುಡುಕಿಕೊಂಡು ಅಮೆರಿಕದ ಯುವತಿ ಸಪ್ತಸಾಗರ ದಾಟಿ ಬಂದಿದ್ದಾರೆ. ಇದೀಗ ಪ್ರೇಮಿಗಳಿಬ್ಬರು ವಿವಾಹ ಬಂಧನಕ್ಕೆ ಒಳಗಾಗಲು ಸಜ್ಜಾಗಿದ್ದಾರೆ.

ಅಮೆರಿಕದ ನಿವಾಸಿ ಫರ್ಹಾನಾ, ತನ್ನ ಪ್ರೇಮಿಯಾದ ಪಶ್ಚಿಮಬಂಗಾಳದ ಮುಶಾಫಿರ್ ಹೊಸೇನ್​ ಪ್ರೀತಿಗಾಗಿ ವಿಮಾನ ಹತ್ತಿ ಬಂದಿದ್ದಾರೆ. ಇದು ಮುಶಾಫಿರ್ ಕುಟುಂಬಸ್ಥರಿಗೆ ಅಚ್ಚರಿ ತಂದಿದೆ. ಬಳಿಕ ಇಬ್ಬರ ಪ್ರೀತಿಯನ್ನು ಒಪ್ಪಿದ್ದು, ವಿವಾಹ ಮಾಡಿಸಲು ಮುಂದಾಗಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಚಿಗುರೊಡೆ ಪ್ರೀತಿ​:ಅಮೆರಿಕದ ಫರ್ಹಾನಾ ಮತ್ತು ಭಾರತದ ಮುಶಾಫಿರ್​ ಮಧ್ಯೆ ಪ್ರೀತಿಗೆ ಸೇತುವೆಯಾಗಿದ್ದು ಸಾಮಾಜಿಕ ಜಾಲತಾಣ. ಮುಶಾಫಿರ್​ ರೀಲ್ಸ್​ ಮಾಡಿ ಹಂಚಿಕೊಳ್ಳುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಫರ್ಹಾನಾ ಈತನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಬಳಿಕ ಅದು ಪ್ರೀತಿಯಾಗಿ ಮಾರ್ಪಟ್ಟಿದೆ.

ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರಂತೆ. ಫರ್ಹಾನಾ ತಮ್ಮ ಪ್ರೇಮಿಯನ್ನು ವರಿಸಲು ಅಮೆರಿಕದಿಂದ ಏಕಾಏಕಿ ಭಾರತಕ್ಕೆ ಹಾರಿ ಬಂದಿದ್ದಾರೆ. ಮುರ್ಷಿದಾಬಾದ್​ನ ರಾಣಿನಗರಕ್ಕೆ ಬಂದ ಬಂದ ಫರ್ಹಾನಾರನ್ನು ಕಂಡ ಮುಶಾಫಿರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಿಕ ಇಬ್ಬರೂ ತಮ್ಮ ಪ್ರೀತಿಯನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮೊದಮೊದಲು ನಿರಾಕರಿಸಿದ ಕುಟುಂಬಸ್ಥರು ಬಳಿಕ ಅಮೆರಿಕನ್ ಯುವತಿಯ ಅಧಮ್ಯ ಧೈರ್ಯ ಮತ್ತು ಇಚ್ಛಾಶಕ್ತಿಗೆ ಮಣಿದು ವಿವಾಹಕ್ಕೆ ಅಸ್ತು ಎಂದಿದ್ದಾರೆ.

"ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆಸಿದ್ದೆವು. ನಂತರ ಪ್ರೀತಿಸಿದೆವು. ನನ್ನನ್ನು ನಂಬಿ ದೂರದ ಅಮೆರಿಕದಿಂದ ಕುಟುಂಬವನ್ನು ತೊರೆದು ನನ್ನ ಬಳಿಗೆ ಬಂದ ಫರ್ಹಾನಾಳ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ" ಎಂದು ಮುಶಾಫಿರ್ ಹೊಸೇನ್ ಹೇಳಿದ್ದಾರೆ.

"ಮುಸಾಫಿರ್‌ನನ್ನು ಪ್ರೀತಿಸುತ್ತಿದ್ದೇನೆ. ಹಾಗಾಗಿ ಅಮೆರಿಕದಿಂದ ಬಂದಿದ್ದೇನೆ. ಮುಸಾಫಿರ್‌ನನ್ನು ಮದುವೆಯಾಗಿ ಭವಿಷ್ಯದಲ್ಲಿ ಅವನನ್ನು ಅಮೆರಿಕಕ್ಕೆ ಕರೆದೊಯ್ಯಲು ಬಯಸುತ್ತೇನೆ" ಎಂದು ಫರ್ಹಾನಾ ಹೇಳಿದರು.

ಓದಿ:ಜಯಲಲಿತಾ ಸಾವಿನ ವರದಿ.. ನನ್ನ ವಿರುದ್ಧದ ಆರೋಪ ಸುಳ್ಳು, ತನಿಖೆಗೆ ಸಿದ್ಧ: ಶಶಿಕಲಾ

ABOUT THE AUTHOR

...view details