ಸಂಬಲ್ಪುರ್ (ಒಡಿಶಾ): ಸೋನೆಪುರ್ ಜಿಲ್ಲೆಯಲ್ಲಿ ಗರ್ಭಿಣಿಯೊಬ್ಬರು ಒಂದೇ ಸಮಯದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಲ್ಲಿನ ಬುರ್ಲಾದ ವಿಮ್ಸರ್ ವೈದ್ಯಕೀಯ ಕೇಂದ್ರದಲ್ಲಿ ಒಂದು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾರೆ. ಈ ನಾಲ್ಕು ನವಜಾತ ಶಿಶುಗಳಿಗೆ SNCU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದಲ್ಲ ಎರಡಲ್ಲ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ - ನಾಲ್ಕು ಮಕ್ಕಳಿಗೆ ಜನ್ಮ
ಒಡಿಶಾದಲ್ಲಿ ಗರ್ಭಿಣಿಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಬುರ್ಲಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಒಂದಲ್ಲ ಎರಡಲ್ಲ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಜಿಲ್ಲೆಯ ಬಿನಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಜಿಪಾಲಿ ಗ್ರಾಮದ ಮಹಿಳೆಯೊಬ್ಬರು ಬುರ್ಲಾದ ಆಸ್ಪತ್ರೆಗೆ ಹೆರಿಗೆ ನೋವಿನಿಂದ ದಾಖಲಾಗಿದ್ದರು. ಹೆರಿಗೆ ಸಹಜವಾಗದ ಕಾರಣ ಇಲಾಖೆ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಮಕ್ಕಳನ್ನು ಹೊರತೆಗೆದಿದ್ದಾರೆ. ಜನಿಸಿದ ಗಂಡು ಮತ್ತು 2 ಹೆಣ್ಣು ಮಗುವಿನ ಜನನ ತೂಕ 1 ಕೆಜಿಗಿಂತ ಕಡಿಮೆ ಇದ್ದು,ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಬುರ್ಲಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಮಸೀದಿ ನಿರ್ಮಾಣಕ್ಕೆ ಭೂದಾನ ಮಾಡಿದ ಹಿಂದೂ ಕುಟುಂಬ: ಕೋಮು ಸಾಮರಸ್ಯ ಸಾರಿದ ಗ್ರಾಮಸ್ಥರು