ಕರ್ನಾಟಕ

karnataka

ETV Bharat / bharat

ನಾನು ಎಂದಿಗೂ ಜಗತ್ತಿನ ಅತ್ಯಂತ ಶ್ರೀಮಂತನಾಗುವುದಿಲ್ಲ: ಆನಂದ್ ಮಹೀಂದ್ರಾ - tweeter

ನಾನು ಎಂದಿಗೂ ಜಗತ್ತಿನ ಮೊದಲ ಶ್ರೀಮಂತನಾಗುವುದಿಲ್ಲ, ಏಕೆಂದರೆ ಅದು ನನ್ನ ಆಶಯವಾಗಿಲ್ಲ ಎಂದು ಆನಂದ್ ಮಹೀಂದ್ರಾ ಟ್ಟೀಟ್ ಮಾಡಿದ್ದಾರೆ.

anand mahindra
ಆನಂದ್ ಮಹೀಂದ್ರಾ

By

Published : Dec 11, 2022, 10:23 PM IST

ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮತ್ತು ಪ್ರತಿಭೆಗಳು ಎಲ್ಲೇ ಇದ್ದರೂ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಪರೂಪದ ಉದ್ಯಮಿ, ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಗ್ರೂಪ್​ ಚೇರ್ಮನ್​ ಆನಂದ ಮಹೀಂದ್ರಾ. ಇದೀಗ ಅವರು ಮತ್ತೊಂದು ಅಚ್ಚರಿಯ ಹೇಳಿಕೆಯೊಂದಿಗೆ ಸುದ್ದಿಯಾಗಿದ್ದಾರೆ.

ಹೌದು,'ನಾನು ಎಂದಿಗೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಆಗುವುದಿಲ್ಲ. ಏಕೆಂದರೆ ಅದು ನನ್ನ ಆಶಯವೂ ಅಲ್ಲ' ಎನ್ನುವ ಮೂಲಕ ಆನಂದ್ ಮಹೀಂದ್ರಾ ಅಚ್ಚರಿಯ ಟ್ಟೀಟ್ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಿಂದ ವಿಶಿಷ್ಟ ಪೋಸ್ಟ್‌ಗಳ ಹೆಸರುವಾಸಿಯಾಗಿರುವ ಆನಂದ್ ಮಹೀಂದ್ರಾ ಸುಮಾರು ಒಂದು ತಿಂಗಳ ಹಿಂದೆ ಟ್ವಿಟ್ಟರ್​ನಲ್ಲಿ ವ್ಯಕ್ತಿಯೊಬ್ಬ ನೀವು ಭಾರತದ ನಂಬರ್‌ ಒನ್‌ ಶ್ರೀಮಂತರಾಗಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ನಂತರ ಉತ್ತರಿಸಿದ ಮಹೀಂದ್ರಾ ಅವರು ಪ್ರಸ್ತುತ ದೇಶದ 73 ನೇ ಶ್ರೀಮಂತ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದರು. ಮಹೀಂದ್ರಾ ಅವರ ಈ ಟ್ವೀಟ್ ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ ಮತ್ತು 20 ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದಿದೆ.

ಇದನ್ನೂ ಓದಿ:ದೇಶಕ್ಕೆ 'ಶಾರ್ಟ್​ಕಟ್'​ ರಾಜಕೀಯ ಅಗತ್ಯವಿಲ್ಲ.. ಸುಸ್ಥಿರ ಅಭಿವೃದ್ಧಿ ಬೇಕು: ಪ್ರಧಾನಿ ಮೋದಿ

ABOUT THE AUTHOR

...view details