ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಗರ ಜೀವನದಿಂದ ಒಂದಿಷ್ಟು ಸಮಯ ದೂರವಿದ್ದು ವಿಶ್ರಾಂತಿ ಪಡಿಬೇಕು ಅಂತ ಕೆಲವರು ಹಳ್ಳಿಗಳತ್ತ ಪಿಕ್ನಿಕ್ ಹೋಗ್ತಾರೆ. ಅಂತಹ ಮಂದಿಗೆ ಇಲ್ಲೊಂದು ಪುಟ್ಟ ಗ್ರಾಮ ಹೇಳಿ ಮಾಡಿಸಿದಂತಿದೆ. ಬಂಕೂರಾ ಪ್ರದೇಶದಿಂದ ಸುಮಾರು 7 ಕಿ.ಮೀಟರ್ನಷ್ಟು ದುರ್ಗಮ ಹಾದಿಯಲ್ಲಿ ತಲುಪಿದರೆ ಈ ಧಂಕಿದಂಗ ಎಂಬ ಪುಟ್ಟ ಹಳ್ಳಿ ಎದುರಾಗಲಿದೆ.
ವಾಹನಗಳ ಓಡಾಟದ ಸದ್ದು, ಗದ್ದಲವಿಲ್ಲ. ಕಿವಿಗಳಿಗೆ ಪಕ್ಷಿಗಳ ಇಂಚರ, ಸಣ್ಣ ತೊರೆಯ ಶಬ್ದ ಬಿಟ್ಟರೆ ಬೇರೇನೂ ಕೇಳಿಸುವುದೇ ಇಲ್ಲ. ಇಂತಹ ನಿರ್ಜನ ಪ್ರದೇಶದಲ್ಲಿ ಸಣ್ಣ ಬೆಳ್ಳಿಯ ರೇಖೆಯಂತೆ ಜಾಯ್ಪಾಂಡಾ ನದಿ ಸ್ವಚ್ಛಂದವಾಗಿ ಹರಿಯುತ್ತದೆ.
ಮೂಲ ಸೌಕರ್ಯವಿಲ್ಲದೆ ಸೊರಗಿದೆ ರಮಣೀಯ ತಾಣ ಆದ್ರೆ ಅಷ್ಟೇನೂ ಪ್ರಚಾರ ಇಲ್ಲದ್ದಕ್ಕೆ ಬಂಕೂರಾ ಪ್ರದೇಶ ಪ್ರವಾಸಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಪ್ರವಾಸವನ್ನೇ ಇಷ್ಟಪಡುವ ಮಂದಿ ಈ ಹೆಸರನ್ನೇ ಕೇಳಿಲ್ಲ. ಕೇಳಿದವರು ಈ ತಾಣಕ್ಕೆ ಭೇಟಿ ಕೊಟ್ಟಿರುವುದು ಕಡಿಮೆ. ಈ ಪ್ರದೇಶಕ್ಕೆ ಮೂಲಸೌಕರ್ಯದ ಕೊರತೆ ಇದ್ದು, ಇದು ಸುತ್ತಮುತ್ತಲಿನ ಸ್ಥಳೀಯರಿಗಷ್ಟೇ ಇರುವ ಪಿಕ್ನಿಕ್ ಸ್ಥಳ ಎಂಬಂತಾಗಿದೆ.
ಧಂಕಿದಂಗದ ಸ್ಥಳೀಯರು ಈ ಪ್ರವಾಸಿ ತಾಣದ ಅಭಿವೃದ್ಧಿಗಾಗಿ ಕಾದಿದ್ದಾರೆ. ಇದರಿಂದ ಗ್ರಾಮದ ಕೆಲ ಯುವಕರಿಗೆ ಇಲ್ಲಿಯೇ ಉದ್ಯೋಗ ದೊರೆತಂತಾಗುತ್ತದೆ. ಜೊತೆಗೆ ಊರಿಗೆ ಇನ್ನಷ್ಟು ಮೂಲಸೌಕರ್ಯ ದೊರೆಯಲಿದೆ ಇದರಿಂದ ಗ್ರಾಮೀಣ ಬದುಕು ಸುಧಾರಿಸಲಿದೆ ಎಂಬುದು ಅವರ ಆಶಯವಾಗಿದೆ.