ಕರ್ನಾಟಕ

karnataka

ETV Bharat / bharat

ಕೈಹಿಡಿದ ಪತಿಗೆ ಜೀವಾವಧಿ ಶಿಕ್ಷೆ ನೀಡಲು ಪತ್ನಿಯ ಮನವಿ.. ಈ ಜೀವ ಎಷ್ಟು ನೊಂದಿದೆ ಕಣ್ರೀ.. - ಉತ್ತರ ಪ್ರದೇಶ ರಾಂಪುರ ಘಟನೆ

ಆತನಿಗೆ ಕಾನೂನು ಜೀವಾವಧಿ ಶಿಕ್ಷೆ ನೀಡಬೇಕು. ಕಳೆದ ಎರಡು ವರ್ಷಗಳಿಂದ ಆತ ಯಾವ ರೀತಿ ತನ್ನ ಬದುಕನ್ನು ನರಕವಾಗಿಸಿದ್ದಾನೋ, ಅದೇ ರೀತಿ ಆತನ ಜೀವನವೂ ನರಕವಾಗುವಂತೆ ಕಾನೂನು ಪ್ರಕಾರ ಆತನಿಗೆ ಶಿಕ್ಷೆಯಾಗಲಿ..

wife-demands-life-imprisonment-for-husband-in-rampur
ನನ್ನ ಪತಿಗೆ ಜೀವಾವಧಿ ಶಿಕ್ಷೆ ನೀಡಿ ಎಂದ ಮಹಿಳೆ

By

Published : Mar 24, 2021, 3:32 PM IST

ರಾಂಪುರ (ಉತ್ತರ ಪ್ರದೇಶ):ತನ್ನ ಪತಿಯನ್ನು ಜೀವಾವಧಿ ಜೈಲಿಗೆ ಹಾಕಿ. ಆತ ಮತ್ತೆಂದೂ ಹೊರಗೆ ಬರದಿರಲಿ ಎಂದು ಪತ್ನಿಯೊಬ್ಬಳು ಮನವಿ ಮಾಡಿರುವ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ರಾಂಪುರ ವ್ಯಾಪ್ತಿಯ ಮಿಲಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ಅಮಾನವೀಯ ಘಟನೆಯೊಂದು ಜರುಗಿತ್ತು. ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಗುಪ್ತಾಂಗವನ್ನೇ ತಂತಿಯಿಂದ ಹೊಲೆದು ಮೃಗೀಯವಾಗಿ ವರ್ತಿಸಿದ್ದ.

ಹಿಂಸೆಗೊಳಗಾದ ಮಹಿಳೆಯ ಆರೋಗ್ಯ ಗಂಭೀರವಾಗಿದ್ದನ್ನು ನೋಡಿದ ಸ್ಥಳೀಯರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ನಂತರ ಒಂದಿಷ್ಟು ಗುಣಮುಖಳಾದ ಆಕೆ ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾಳೆ. ಸದ್ಯ ತಂದೆಯ ಮನೆಯಲ್ಲಿ ಆಶ್ರಯ ಪಡೆದಿರುವ ಮಹಿಳೆ ತನ್ನ ಕ್ರೂರಿ ಗಂಡನಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಿದ್ದಾಳೆ.

ಓದಿ : ಪತ್ನಿ ಮೇಲೆ ಹೆಚ್ಚಿದ ಅನುಮಾನ... ಖಾಸಗಿ ಜಾಗಕ್ಕೆ ಹೊಲಿಗೆ ಹಾಕಿದ ಗಂಡ!

ಕ್ರೂರಿ ಪತಿಗೆ ಕಠಿಣ ಶಿಕ್ಷೆ ನೀಡಿ

ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆ ಈಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು, ತನ್ನ ಗಂಡನಿಗೆ ಆತನ ಜೀವನ ದುರ್ಭರವಾಗುವಂಥ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾಳೆ. ಮದುವೆಯಾಗಿನಿಂದಲೂ ಪೀಡಿಸುತ್ತಿರುವ ಪತಿಗೆ ಈ ಸಮಾಜವೇ ಬಹಿಷ್ಕಾರ ಹಾಕಬೇಕು.

ಆತನಿಗೆ ಕಾನೂನು ಜೀವಾವಧಿ ಶಿಕ್ಷೆ ನೀಡಬೇಕು. ಕಳೆದ ಎರಡು ವರ್ಷಗಳಿಂದ ಆತ ಯಾವ ರೀತಿ ತನ್ನ ಬದುಕನ್ನು ನರಕವಾಗಿಸಿದ್ದಾನೋ, ಅದೇ ರೀತಿ ಆತನ ಜೀವನವೂ ನರಕವಾಗುವಂತೆ ಕಾನೂನು ಪ್ರಕಾರ ಆತನಿಗೆ ಶಿಕ್ಷೆಯಾಗಲಿ ಎಂದು ಮಹಿಳೆ ಬೇಡಿಕೆ ಇಟ್ಟಿದ್ದಾಳೆ.

ನನ್ನ ಪತಿಗೆ ಜೀವಾವಧಿ ಶಿಕ್ಷೆ ನೀಡಿ ಎಂದ ಪತ್ನಿ..

ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಿದ್ದ!:ಎರಡು ವರ್ಷಗಳಿಂದಲೂ ಪತಿ ವಿಪರೀತ ಹಿಂಸೆ ನೀಡಿದ್ದಾನೆ. ಕೈಕಾಲು ಹಿಡಿದು ಬೇಡಿಕೊಂಡರೂ ಆತ ನನ್ನ ಮೇಲೆ ಕರುಣೆ ತೋರಿಲ್ಲ.

ನನ್ನನ್ನು ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಿದ್ದ ಆತ, ಯಾರೂ ಕಂಡು ಕೇಳರಿಯದ ಶಿಕ್ಷೆಯನ್ನು ನಿನಗೆ ನೀಡುತ್ತೇನೆ ಎನ್ನುತ್ತಿದ್ದ. ಇಂಥವನಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡಕೂಡದು. ಅವನಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಿ ಎಂದಿದ್ದಾಳೆ.

ABOUT THE AUTHOR

...view details