ಕರ್ನಾಟಕ

karnataka

ETV Bharat / bharat

ಕಿರಿಕ್​ ಮಾಡ್ತಿದ್ದ ಗಂಡನ ರುಂಡವನ್ನೇ ಕಡಿದು ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋದ ಪತ್ನಿ! - ಆಂಧ್ರಪ್ರದೇಶ ಸುದ್ದಿ

ಪತಿಯನ್ನು ಪತ್ನಿಯೇ ಬರ್ಬರವಾಗಿ ಕೊಚ್ಚಿ ಕೊಂದಿದ್ದಲ್ಲದೇ ಆತನ ರುಂಡವನ್ನು ಕತ್ತರಿಸಿ ನೇರ ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋಗಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

Wife cuts husband head in Chittoor, Wife cuts husband head in Andhra Pradesh, Andhra Pradesh crime news, Andhra Pradesh latest news, ಚಿತ್ತೂರಿನಲ್ಲಿ ಪತಿಯ ರುಂಡವನ್ನು ಕಡಿದ ಪತ್ನಿ, ಆಂಧ್ರಪ್ರದೇಶದಲ್ಲಿ ಪತಿಯ ರುಂಡವನ್ನು ಕಡಿದ ಪತ್ನಿ, ಆಂಧ್ರಪ್ರದೇಶ ಅಪರಾಧ ಸುದ್ದಿ, ಆಂಧ್ರಪ್ರದೇಶ ಸುದ್ದಿ,
ಕಿರಿಕ್​ ಮಾಡ್ತಿದ್ದ ಗಂಡನ ರುಂಡವನ್ನೇ ಕಡಿದು ಪೊಲೀಸ್​ ಠಾಣೆಗೆ ತೆಗೆದೊಯ್ದ ಪತ್ನಿ

By

Published : Jan 21, 2022, 8:02 AM IST

ರೇಣಿಗುಂಟ(ಆಂಧ್ರಪ್ರದೇಶ) :ಚಿತ್ತೂರು ಜಿಲ್ಲೆ ರೇಣಿಗುಂಟದಲ್ಲಿ ದಾರುಣ ಘಟನೆಯೊಂದ ಬೆಳಕಿಗೆ ಬಂದಿದೆ. ಪತಿಯನ್ನು ಪತ್ನಿಯೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೇ ಆತನ ರುಂಡವನ್ನು ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿದ್ದಾರೆ.

ಕಿರಿಕ್​ ಮಾಡ್ತಿದ್ದ ಗಂಡನ ರುಂಡವನ್ನೇ ಕಡಿದು ಪೊಲೀಸ್​ ಠಾಣೆಗೆ ತೆಗೆದೊಯ್ದ ಪತ್ನಿ

ಪೊಲೀಸರ ಪ್ರಕಾರ, ರವಿಚಂದ್ರನ್ (53) ಮತ್ತು ವಸುಂಧರಾ ದಂಪತಿಗಳು ಪೊಲೀಸ್​ಲೈನ್​ ನಗರದಲ್ಲಿ ವಾಸವಿದ್ದರು. ಅವರಿಗೆ 20 ವರ್ಷದ ಮಗನಿದ್ದಾನೆ. ಗುರುವಾರ ಬೆಳಗ್ಗೆ ದಂಪತಿ ನಡುವೆ ಸಣ್ಣಪುಟ್ಟ ಜಗಳ ನಡೆದಿದೆ. ಈ ಹಿನ್ನೆಲೆ ಕುಪಿತಳಾದ ವಸುಂಧರಾ, ಚಾಕುವಿನಿಂದ ತನ್ನ ಪತಿ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾಳೆ, ಬಳಿಕ ತಲೆ ಕತ್ತರಿಸಿದ್ದಾರೆ. ಬಳಿಕ ತಲೆಯನ್ನು ಬ್ಯಾಗ್​ನಲ್ಲಿಟ್ಟುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.

ಓದಿ:ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಸಭೆ: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?

ಘಟನೆಯಿಂದ ಬೆಚ್ಚಿಬಿದ್ದ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಕೊಲೆ ನಡೆದ ರೀತಿಯನ್ನು ಪರಿಶೀಲಿಸಿದ ಪೊಲೀಸರು ಬಳಿಕ ಮೃತದೇಹವನ್ನು ತಿರುಪತಿ ಎಸ್‌ವಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಈ ಘಟನೆ ಕುರಿತು ರೇಣಿಗುಂಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details