ನವದೆಹಲಿ:ಭಾರತದ ವಿದ್ಯುತ್ ಪೂರೈಕೆ, ಬಳಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ನಿವಾರಿಸಿ, ಈ ಕ್ಷೇತ್ರದಲ್ಲಾಗುವ ಅವ್ಯವಹಾರದ ತಡೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬುಧವಾರ 3.03 ಲಕ್ಷ ಕೋಟಿ ರೂ ಮೌಲ್ಯದ ಹೊಸ ಯೋಜನೆಗೆ ನಾಂದಿ ಹಾಡಿದೆ.
ಇದರ ಜೊತೆಗೆ ಯೋಜನೆಯು ದಕ್ಷ ವಿತರಣಾ ಕಾರ್ಯವಿಧಾನದ ಮೂಲಕ ಗ್ರಾಹಕರಿಗೆ ವಿದ್ಯುತ್ ಸರಬರಾಜಿನ ಪ್ರಮಾಣ, ವಿಶ್ವಾಸಾರ್ಹತೆ ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಈ ಉದ್ದೇಶಕ್ಕಾಗಿ ದೇಶಾದ್ಯಂತ 25 ಕೋಟಿ ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಲು ಸರ್ಕಾರ ಡಿಸ್ಕಾಮ್ಗಳಿಗೆ ಸೂಚನೆ ನೀಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಕೃಷಿಕ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಹಕರಿಗೆ 10 ಕೋಟಿ ಮೀಟರ್ಗಳನ್ನು ಡಿಸೆಂಬರ್ 2023 ರೊಳಗೆ ಅಳವಡಿಸಲು ನಿರ್ಧರಿಸಲಾಗಿದೆ.
ಸ್ಮಾರ್ಟ್ ಅಥವಾ ಪ್ರಿಪೇಯ್ಡ್ ಮೀಟರುಗಳನ್ನು ಹೊಂದಲು ಇಚ್ಚಿಸುವ ಗ್ರಾಹಕರು ಈ ವಿದ್ಯುತ್ ಸಂಪರ್ಕ ಪಡೆಯಬಹುದು. ಗ್ರಾಹಕರು ಈ ವ್ಯವಸ್ಥೆಯ ಮೂಲಕ ವಿದ್ಯುತ್ ದರ, ವಿತರಣಾ ಕಂಪನಿ ಒದಗಿಸುವ ಕಂಪನಿಗಳಿಂದ ಬಳಕೆ ಮಾಡಿದ ವಿದ್ಯುತ್ ಕುರಿತು ಸರಿಯಾದ ವಿವರ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್ ಸೇವೆ ಪಡೆಯಲು ಗ್ರಾಹಕರು ಸ್ವತಃ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಳ್ಳಬಹುದು ಅಥವಾ ಡಿಸ್ಕಾಂನಿಂದಲೂ ಪಡೆಯಬಹುದಾಗಿದೆ.
ಸರ್ಕಾರದ ನೀಡಿರುವ ಮಾಹಿತಿ ಪ್ರಕಾರ, ಈ ಸ್ಮಾರ್ಟ್ ಮೀಟರ್ಗಳು ಗ್ರಾಹಕರಿಗೆ ತಮ್ಮ ವಿದ್ಯುತ್ ಬಳಕೆಯನ್ನು ಮಾಸಿಕ ಆಧಾರದ ಬದಲು ರಿಯಲ್-ಟೈಮ್ ಬಳಕೆ ಆಧಾರದ ಮೇಲೆ ಪಾವತಿಯಾದ ಹಣವನ್ನು ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಪ್ರಿಪೇಯ್ಡ್ ವಿದ್ಯುತ್ ಸ್ಮಾರ್ಟ್ ಮೀಟರ್ ಅನ್ನು ಅಳವಡಿಸಿಕೊಂಡ ಮೇಲೆ ಮೊಬೈಲ್ನಿಂದಲೇ ರೀಚಾರ್ಜ್ ಮಾಡಬಹುದಾಗಿದೆ. ಹಾಗೆಯೇ ಹಣವನ್ನು ಮೊದಲು ಪಾವತಿ ಮಾಡಿ ವಿದ್ಯುತ್ ಖರೀದಿಸಬಹುದು. ನೀವು ಹೀಗೆ ಬಳಕೆ ಮಾಡಿಕೊಂಡ ವಿದ್ಯುತ್ ಹಾಗೂ ಅವುಗಳ ಸಂಕ್ಷಿಪ್ತ ವಿವರಗಳನ್ನು ಸ್ಮಾರ್ಟ್ ಮೀಟರ್ ಒಳಗೊಂಡಿರುತ್ತದೆ.
1. 'ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್' ಎಂದರೇನು?
ಹೆಸರೇ ಸೂಚಿಸುವಂತೆ, ಸ್ಮಾರ್ಟ್ ಮೀಟರ್ ಎನ್ನುವುದು ಹೊಸ ರೀತಿಯ ವಿದ್ಯುತ್ ಮೀಟರ್. ಇದು ಮೀಟರ್ ರೀಡಿಂಗ್ಗಳನ್ನು ವಿದ್ಯುತ್ ಪೂರೈಕೆದಾರರಿಗೆ ಮತ್ತು ಗ್ರಾಹಕರಿಗೆ ನೆಟ್ವರ್ಕ್ ಮೂಲಕ ಕಳುಹಿಸಬಹುದು. ಹೊಸ ವ್ಯವಸ್ಥೆಯು ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆ ಮಾಡುವುದರ ಜೊತೆಗೆ, ಒಂದು ಪ್ರದೇಶದಲ್ಲಿ ನಿಜವಾಗಿಯೂ ಎಷ್ಟು ಪ್ರಮಾಣದ ವಿದ್ಯುತ್ ಅಗತ್ಯವಿದೆ ಎಂಬ ಮಾಹಿತಿಯನ್ನು ಡಿಸ್ಕಾಮ್ಗಳಿಗೆ ನೀಡುತ್ತದೆ.
2. ಹಾಗಿದ್ದರೆ, ಸ್ಮಾರ್ಟ್ ಮೀಟರ್ನ ಕಾರ್ಯವಿಧಾನ ಹೇಗೆ?