ಕರ್ನಾಟಕ

karnataka

ETV Bharat / bharat

Video - ಶ್ರೀಕೃಷ್ಣ ಜನ್ಮಾಷ್ಟಮಿ.. RSS ಕೇಂದ್ರದಲ್ಲಿ ಕೊಳಲು ನುಡಿಸಿದ 200 ಕ್ಕೂ ಹೆಚ್ಚು ಮಕ್ಕಳು - ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಉಜ್ಜಯಿನಿಯಲ್ಲಿ ಆರ್​ಎಸ್​ಎಸ್​ನ 200ಕ್ಕೂ ಮಕ್ಕಳು ಕೊಳಲು ನುಡಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ
ಶ್ರೀಕೃಷ್ಣ ಜನ್ಮಾಷ್ಟಮಿ

By

Published : Aug 30, 2021, 3:45 PM IST

ಉಜ್ಜಯಿನಿ (ಮಧ್ಯ ಪ್ರದೇಶ):ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಮನೆ ಮಾಡಿದೆ. ಇಂದು ಮಹಾಕಲ್ ನಗರದ ಭಾರತ ಮಾತಾ ಮಂದಿರದ ಮುಂದೆ 200 ಕ್ಕೂ ಹೆಚ್ಚು ಮಕ್ಕಳು ಕೊಳಲು ನುಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​​ಎಸ್​​) ಸದಸ್ಯರಾಗಿರುವ 200 ಮಕ್ಕಳು ಆನ್​ಲೈನ್​ ಮೂಲಕ 3 ತಿಂಗಳು ತರಬೇತಿ ಪಡೆದಿದ್ದರು. ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆರ್​ಎಸ್​ಎಸ್​ ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸುತ್ತದೆ.

ಆರ್​​ಎಸ್​ಎಸ್​ನ ಪ್ರಾದೇಶಿಕ ಸಂಘಚಾಲಕ ಅಶೋಕ್ ಸೋಹ್ನಿ ಮತ್ತು ದೈಹಿಕ ಶಿಕ್ಷಣದ ಮುಖ್ಯಸ್ಥ ಜಗದೀಶ್ ಪ್ರಸಾದ್ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೊಳಲು ನುಡಿಸಿದ 200 ಕ್ಕೂ ಹೆಚ್ಚು ಮಕ್ಕಳು

ಇದನ್ನೂ ಓದಿ: ಕೃಷ್ಣಾಷ್ಟಮಿ ಬಂಪರ್​: ಭಾರತಕ್ಕೆ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕಗಳ ಸುರಿಮಳೆ

ಕೋವಿಡ್​ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ABOUT THE AUTHOR

...view details