ಅಹಮದಾಬಾದ್(ಗುಜರಾತ್) :ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಮುಂಬರಲಿರುವ ಆರು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಫೆಬ್ರವರಿ 14ರಂದು ವಡೋದರಾದಲ್ಲಿ ನಡೆಯುತ್ತಿದ್ದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಸಿಎಂ ರೂಪಾನಿ ವೇದಿಕೆಯಲ್ಲೇ ಕುಸಿದಿದ್ದರು.
ಆಸ್ಪತ್ರೆಗೆ ದಾಖಲಾದ ಮರುದಿನ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು. ಅಂದಿನಿಂದ ಅವರು ಯು ಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ನೀಡಿರುವ ಸಿಎಂ ರೂಪಾನಿ, ಫೆ.21ರಂದು ನಡೆಯಲಿರುವ ಚುನಾವಣೆಯಲ್ಲಿ ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರಗಳಲ್ಲಿ ಬಿಜೆಪಿ ಬೆಂಬಲಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ.
ನೀವು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪರ ಮತ ಚಲಾಯಿಸುವಿರಿ ಎಂದು ನನಗೆ ವಿಶ್ವಾಸವಿದೆ. ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಯೊಂದಿಗೆ ನನ್ನ ಆರೋಗ್ಯವೂ ಸುಧಾರಿಸುತ್ತಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ರಾಮೋಜಿ ಫಿಲಂ ಸಿಟಿ ಪುನಾರಂಭ; ಪ್ರಥಮ ದಿನವೇ ಸಾವಿರಾರು ಪ್ರವಾಸಿಗರ ಆಗಮನ
ಚುನಾವಣೆ ಒಂದು ಉತ್ಸವದಂತೆ ಹಾಗೂ ಮತದಾನವು ಎಲ್ಲಾ ನಾಗರಿಕರ ಧರ್ಮನಿಷ್ಠ ಕರ್ತವ್ಯವಾಗಿದೆ. ಜನರು ಅನೇಕ ವರ್ಷಗಳಿಂದ ಬಿಜೆಪಿ ಮೇಲೆ ನಂಬಿಕೆ ಇರಿಸುತ್ತಿದ್ದಾರೆ. ಈ ಬಾರಿ ಸಹ ನೀವು ಮತ್ತೊಮ್ಮೆ ಬಿಜೆಪಿ ಬೆಂಬಲಿಸುವಿರಿ ಎಂದು ನನಗೆ ಖಾತ್ರಿಯಿದೆ.
ನಮಗೆ ಅಧಿಕಾರವು ಜನರಿಗೆ ಸೇವೆ ಸಲ್ಲಿಸುವ ಮಾಧ್ಯಮವಾಗಿದೆ. ನಮ್ಮ ನಗರಗಳನ್ನು ವಿಶ್ವ ಭೂಪಟದಲ್ಲಿ ಇಡುವುದು ನಮ್ಮ ಗುರಿ. ನನ್ನ ಸರ್ಕಾರ ನಿಮ್ಮನ್ನು ನಿರಾಸೆ ಮಾಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ವಿಜಯ್ ರೂಪಾನಿ ಹೇಳಿದರು.
ಫೆ.21ರಂದು ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಫೆ.28 ರಂದು 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ಮತದಾನ ನಡೆಯಲಿದೆ.