ಕರ್ನಾಟಕ

karnataka

ETV Bharat / bharat

ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್​ಗೆ ನೆಟ್ಟಿಗರು ಫುಲ್​ ಫಿದಾ..! - dog

15 ಸೆಕೆಂಡ್​ಗಳ ಈ ವಿಡಿಯೋದಲ್ಲಿ 2 ಕಾಲಲ್ಲೇ ನಡೆದ ನಾಯಿಯು ಕುರ್ಚಿಯನ್ನು ಅಡುಗೆ ಮನೆವರೆಗೆ ತಳ್ಳಿಕೊಂಡು ಹೋಗಿದೆ. ಬಳಿಕ ಕುರ್ಚಿಯ ಮೇಲೆ ಹತ್ತಿ ಆಹಾರ ಸೇವಿಸಿದೆ..

ಶ್ವಾನ
ಶ್ವಾನ

By

Published : Aug 22, 2021, 4:48 PM IST

ಮನೆಯಲ್ಲೊಂದು ನಾಯಿ ಸಾಕಿದ್ದೀರಿ ಅಂದರೆ, ಮುಗೀತು. ಮನರಂಜನೆಗೆ ಯಾವುದೇ ಕೊರತೆಯಿಲ್ಲ. ಶ್ವಾನಗಳು ಮಾಡುವ ಚೇಷ್ಟೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಲೇ ಇರುತ್ತವೆ.

ಇದೀಗ ಇಂಥದ್ದೇ ಒಂದು ವಿಡಿಯೋ ಜಾಲತಾಣದಲ್ಲಿ ಧೂಳೆಬ್ಬೆಸುತ್ತಿದೆ. ಈ ವಿಡಿಯೋದಲ್ಲಿ ನಾಯಿಯು ಆಹಾರ ತಿನ್ನಲು ಉಪಯೋಗಿಸಿದ ಬುದ್ಧಿವಂತಿಕೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

15 ಸೆಕೆಂಡ್​ಗಳ ಈ ವಿಡಿಯೋದಲ್ಲಿ 2 ಕಾಲಲ್ಲೇ ನಡೆದ ನಾಯಿಯು ಕುರ್ಚಿಯನ್ನು ಅಡುಗೆ ಮನೆಯವರೆಗೆ ತಳ್ಳಿಕೊಂಡು ಹೋಗಿದೆ. ಬಳಿಕ ಕುರ್ಚಿಯ ಮೇಲೆ ಹತ್ತಿ ಆಹಾರ ಸೇವಿಸಿದೆ.

ಇದನ್ನೂ ಓದಿ: Viral Video- ತಾಲಿಬಾನ್​ ಜೊತೆ ಮಾಜಿ ಅಧ್ಯಕ್ಷ ಘನಿ ಸಹೋದರ ಹಷ್ಮತ್ ಮಾತುಕತೆ!

ಮಾಲೀಕ ಶ್ವಾನಕ್ಕೆ ಗೊತ್ತಿಲ್ಲದಂತೆ ಈ ಎಲ್ಲಾ ದೃಶ್ಯ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ‘ಸಾಕು ನಾಯಿಯನ್ನು ಒಂದು ನಿಮಿಷ ಏಕಾಂಗಿಯಾಗಿ ಬಿಟ್ಟರೆ ಹೀಗೆಲ್ಲಾ ಆಗುತ್ತದೆ’ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ 4.2 ಮಿಲಿಯನ್​ ವೀಕ್ಷಣೆ ಪಡೆದಿದ್ದು, ಲಕ್ಷಾಂತರ ರಿಟ್ವೀಟ್​ಗಳು ಬಂದಿವೆ.

ABOUT THE AUTHOR

...view details