ರಾಮನಗರ (ಉತ್ತರಾಖಂಡ) : ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಹೊರಭಾಗದಲ್ಲಿ ಹುಲಿಯು ಬೈಕ್ ಸವಾರನ ಮೇಲೆ ದಾಳಿ ಮಾಡಿದ ದೃಶ್ಯಗಳು ಹೊರಬಿದ್ದಿವೆ. ಜುಲೈ 16 ರಂದು ಸಂಭವಿಸಿದ ಅಪಘಾತದ ನಂತರ ಕಾರ್ಬೆಟ್ ಆಡಳಿತವು ಈಗ ಹುಲಿಯನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ.
ಅರಣ್ಯ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಧೀರಜ್ ಪಾಂಡೆ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಹುಲಿಯನ್ನು ಎರಡು ಮೂರು ಬಾರಿ ಪತ್ತೆಹಚ್ಚಲಾಗಿದೆ.
ಅದರ ನಿಖರವಾದ ಸ್ಥಾನವನ್ನು ನಾವು ಇನ್ನೂ ಕಂಡುಕೊಂಡಿಲ್ಲ.ಆದರೆ, ಮುಂಗಾರು ಮಳೆಯಿಂದಾಗಿ, ಅರಣ್ಯದ ಒಳಭಾಗವು ಶೋಧ ಕಾರ್ಯಾಚರಣೆಗೆ ಅಡೆತಡೆಗಳು ಎದುರಾಗಿವೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.