ಕರ್ನಾಟಕ

karnataka

ETV Bharat / bharat

ಲವ್​ ಜಿಹಾದ್​ಗೆ ತಡೆ​; ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರ ಮಸೂದೆಗೆ ಅಂಗೀಕಾರ!

ಲವ್‌ ಜಿಹಾದ್‌ ವಿರುದ್ಧ ಇದೀಗ ಮತ್ತೊಂದು ರಾಜ್ಯ ತೊಡೆತಟ್ಟಿದ್ದು, ಬಲವಂತದ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯನ್ನು ಉತ್ತರ ಪ್ರದೇಶ ವಿಧಾನಸಭೆ​ ಧ್ವನಿ ಮತದ ಮೂಲಕ ಅಂಗೀಕಾರ ಮಾಡಿದೆ.

By

Published : Feb 24, 2021, 6:17 PM IST

Legislative Assembly
Legislative Assembly

ಲಕ್ನೋ(ಉತ್ತರ ಪ್ರದೇಶ): ಬಲವಂತದ ಧಾರ್ಮಿಕ ಮತಾಂತರ ನಿಷೇಧ ಮಸೂದೆಗೆ ಉತ್ತರ ಪ್ರದೇಶ ವಿಧಾನಸಭೆಯ ಅಂಗೀಕಾರ ನೀಡಿದೆ.

ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ರಮೇಶ್ ಖನ್ನಾ ವಿಧಾನಸಭೆಯಲ್ಲಿ ಮಾತನಾಡಿ, ಧಾರ್ಮಿಕ ಮತಾಂತರದ ಮೂಲಕ ಮೋಸ ಮಾಡಿ ವಿವಾಹವಾಗುವುದು ಕಂಡು ಬರುತ್ತಿದ್ದು, ಹೀಗಾಗಿ ಈ ಕಾನೂನಿನ ಮೂಲಕ ಶಿಕ್ಷೆ ವಿಧಿಸಲಾಗುವುದು ಎಂದರು.

ಓದಿ: ಕೊರೊನ ಲಸಿಕೆ ಉಚಿತವಿಲ್ಲ! 'ಪ್ರೈವೇಟ್ ಆಸ್ಪತ್ರೆಗಳಲ್ಲಿ ಜನ ಹಣ ಪಾವತಿಸಬೇಕು'

ಕಾನೂನಿನ ಪ್ರಕಾರ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದ್ದು, ಸ್ವಯಂ ಪ್ರೇರಣೆಯಿಂದ ಮತಾಂತರಗೊಳ್ಳುವವರು ಎರಡು ತಿಂಗಳ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದಿದ್ದಾರೆ.

ಈ ಮಸೂದೆ ಆಯ್ಕೆ ಸಮಿತಿಗೆ ಕಳುಹಿಸಲು ಪ್ರತಿಪಕ್ಷಗಳು ಶಿಫಾರಸು ಮಾಡಿದ್ರೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಆರಾಧನಾ ಮಿಶ್ರಾ ಮದುವೆಯಾಗುವುದು ಅವರ ಗೌಪ್ಯತೆ ವಿಷಯವಾಗಿದೆ ಎಂದಿದ್ದಾರೆ. ಅದನ್ನ ಬಲವಂತವಾಗಿ ನಿಲ್ಲಿಸುವುದು ಸೂಕ್ತವಲ್ಲ ಎಂದಿದ್ದಾರೆ.

ABOUT THE AUTHOR

...view details