ಆಗ್ರಾ(ಉತ್ತರ ಪ್ರದೇಶ):ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಹೆಸರು ಬದಲಿಸಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ನನ್ನ ಪತಿ ಲವ್ ಜಿಹಾದ್ ಮಿಷನ್ನಲ್ಲಿದ್ದಾರೆ' ಎಂದು ಆಗ್ರಾದ ಸಂತ್ರಸ್ತ ಹಿಂದೂ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಅವರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ರಾಕಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಮೂಲಕ ಅವರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ: ಸಂತ್ರಸ್ತೆಯ ಪ್ರಕಾರ "2018ರಲ್ಲಿ ಆಕೆಯ ಮೊಬೈಲ್‌ಗೆ ಮಿಸ್ಡ್ ಕಾಲ್ ಬಂದಿತ್ತು. ಬಳಿಕ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮಾತನಾಡಿ ತಾನು ಹಿಂದೂ ಯುವಕ. ಹೆಸರು ರಾಜ ಎಂದು ಪರಿಚಯಿಸಿಕೊಂಡಿದ್ದ. ಅಪರಿಚಿತ ನಂಬರ್ನಿಂದ ಕರೆ ಬಂದ ಕಾರಣ ಆಕೆ ಕಾಲ್ ಕಟ್ ಮಾಡಿದ್ದಳು. ಬಳಿಕ ಆತ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಲು ಆರಂಭಿಸಿದ್ದ. ಆರೋಪಿ ತನ್ನನ್ನು ನಿನ್ನ ಕುಟುಂಬದ ಪರಿಚಯಸ್ಥ ಎಂದು ಹೇಳಿಕೊಂಡಿದ್ದು, ಸ್ನೇಹ ಮಾಡುವಂತೆ ಕೇಳಿಕೊಂಡಿದ್ದ. ಒಂದು ಭೇಟಿಯ ನಂತರ ಇಬ್ಬರೂ ಸ್ನೇಹಿತರಾದರು. ಬಳಿಕ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಈ ನಡುವೆ ರಾಜ ಮೋಸದಿಂದ ಆಕೆಯ ಅಶ್ಲೀಲ ವಿಡಿಯೋ ಮಾಡಿಕೊಂಡಿದ್ದ" ಎಂದು ಆರೋಪಿಸಲಾಗಿದೆ.
ಬಳಿಕ ವಿಡಿಯೋ ಹೆಸರಿನಲ್ಲಿ ಬೆದರಿಸಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದ. ನನ್ನ ಮಗ ರಾಜನ ಬಳಿ ನಿನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ರಾಜಾ ತಂದೆ ಮೊಹಮ್ಮದ್ ರಿಯಾಜ್ ಕೂಡ ಬೆದರಿಸಿದ್ದರು. ಸಂತ್ರಸ್ತೆ ಕುಟುಂಬದ ಗೌರವಕ್ಕಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು.
ವಿವಾಹದ ಬಳಿಕ ರಾಜ ಮೊದಲ ಬಾರಿಗೆ ತನ್ನ ಮನೆಗೆ ಕರೆದೊಯ್ದಿದ್ದ. ಅವರ ಮನೆ ಬಲುಗಂಜ್‌ನ ದರ್ಗೈಯಾ ಪ್ರದೇಶದಲ್ಲಿತ್ತು. ಇದನ್ನು ನೋಡಿ ಆಕೆ ಬೆಚ್ಚಿಬಿದ್ದಿದ್ದಳು. ಮನೆಗೆ ತಲುಪಿದಾಗ ರಾಜನ ತಾಯಿ ಬಳಿಅವನ ಧರ್ಮದ ಬಗ್ಗೆ ಕೇಳಿದಳು. ಆಗ ರಾಜ ತಾನು ಮುಸ್ಲಿಂ ಧರ್ಮಕ್ಕೆ ಸೇರಿದವನೆಂದು ಹೇಳಿದ್ದ. ಆತನ ಹೆಸರು ಮೊಯೀನ್ ಖಾನ್ ಎಂದು ತಿಳಿಸಿದ್ದ.