ನವದೆಹಲಿ: ಗಡ್ಡ ಮತ್ತು ಪೇಟ ಧರಿಸಿರುವ ಸಿಖ್ಖರಿಗೆ ಮೆರೀನ್‌ನಲ್ಲಿ ಕಮಾಂಡ್ ಆಗಿ ಸೇವೆ ಸಲ್ಲಿಸಲು ಅಮೆರಿಕದ ನ್ಯಾಯಾಲಯ ಅನುಮತಿ ನೀಡಿದೆ. ಸಿಖ್ಖರಿಗೆ ಗಡ್ಡ ಮತ್ತು ಪೇಟ ಧರಿಸಲು ಅನುಮತಿ ನೀಡುವಂತೆ ನೌಕಾಪಡೆಗೆ ನ್ಯಾಯಾಲಯವು ಆದೇಶಿಸಿದೆ.
ಸಿಖ್ ಧರ್ಮದ ಪ್ರಕಾರ ಪುರುಷರು ಕೂದಲು, ಗಡ್ಡವನ್ನು ಕತ್ತರಿಸಬಾರದು ಮತ್ತು ತಲೆಗೆ ಪೇಟವನ್ನು ಧರಿಸಿರಬೇಕು. ಇದನ್ನು ಗಮನಿಸಿದ ಅಮೆರಿಕ ನ್ಯಾಯಾಲಯವು ಸಿಖ್ ಸೈನಿಕರ ಪರವಾಗಿ ತೀರ್ಪು ನೀಡಿದೆ. ಕಳೆದ ವರ್ಷ13 ವಾರಗಳ ಮೂಲಭೂತ ತರಬೇತಿಯ ಅವಧಿಯಲ್ಲಿ ಪೇಟ ಧರಿಸಿರುವ ಮೂವರು ಸಿಖ್ಖರಿಗೆ ಮೆರೈನ್ ಕಾರ್ಪ್ಸ್ ವಿನಾಯತಿ ನೀಡಿರಲಿಲ್ಲ. ಈ ಕುರಿತು ಸಿಖ್ ಸೈನಿಕರು ನ್ಯಾಯಾಲಯದ ಮೊರೆ ಹೋಗಿದ್ದರು.