ಕರ್ನಾಟಕ

karnataka

By

Published : Apr 25, 2021, 2:26 PM IST

ETV Bharat / bharat

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಪತ್ನಿಗೆ ಕೊರೊನಾ ಸೋಂಕು

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕೊರೊನಾಗೆ ತುತ್ತಾಗಿದ್ದು, ಈ ಬಗ್ಗೆ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದ್ದಾರೆ.

Union minister Babul Supriyo tests positive for COVID
ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ

ಕೋಲ್ಕತಾ (ಪಶ್ಚಿಮ ಬಂಗಾಳ): ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸುಪ್ರಿಯೋ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, "ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೋವಿಡ್​ ಪರೀಕ್ಷೆ ನಡೆಸಿದ್ದೇವೆ. ನಾನು 2 ನೇ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿರುವೆ. ಇದರಿಂದ ಅಸನ್ಸೋಲ್‌ನಲ್ಲಿ ನನಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಬೇಸರವಾಗಿದೆ" ಎಂದಿದ್ದಾರೆ.

ಅಸನ್ಸೋಲ್‌ನ ಎರಡು ಬಾರಿ ಸಂಸದರಾದ ಸುಪ್ರಿಯೋ ಅವರು ಮತದಾನ ಮುಗಿದಿರುವ ಟೋಲಿಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 36 ವಿಧಾನಸಭಾ ಕ್ಷೇತ್ರಗಳಿಗೆ ಏಳನೇ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ.

ABOUT THE AUTHOR

...view details