ಕರ್ನಾಟಕ

karnataka

ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ.. ಯೋಧರ ಕಾರ್ಯಕ್ಕೆ ಶ್ಲಾಘನೆ

By

Published : Jun 8, 2022, 1:34 PM IST

Updated : Jun 8, 2022, 1:57 PM IST

ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದು, ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Boy Falls Into Borewell
Boy Falls Into Borewell

ಸುರೇಂದ್ರನಗರ(ಗುಜರಾತ್​): ಜಮೀನಿನಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಬಾಲಕನ ರಕ್ಷಣೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಗುಜರಾತ್​​ನ ಸುರೇಂದ್ರ ನಗರ ಜಿಲ್ಲೆಯ ದುದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡೂವರೆ ವರ್ಷದ ಮಗು ಬೋರ್​​ವೆಲ್​​​ನಲ್ಲಿ ಬಿದ್ದಿದ್ದು, ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಮಗುವಿನ ರಕ್ಷಣೆ ಮಾಡಲಾಗಿದೆ.

ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ

ಕಳೆದ ಮಂಗಳವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ಹೊಲದಲ್ಲಿ ಆಟವಾಡ್ತಿದ್ದ ಮಗು ಶಿವಂ ದಿಢೀರ್​ ಆಗಿ 300 ಅಡಿ ಆಳದ ಬೋರ್​​ವೆಲ್​​ನೊಳಗೆ ಬಿದ್ದಿದ್ದಾನೆ. ಮಗು ಕಾಣಿಸಿಕೊಳ್ಳದ ಕಾರಣ ತಾಯಿ ಶಿವಮ್ಮ ಹುಡುಕಾಟ ನಡೆಸಿದ್ದು, ಈ ವೇಳೆ, ಬೋರ್​​ವೆಲ್​​ನಲ್ಲಿ ಅದರ ಶಬ್ದ ಕೇಳಿ ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳ, ಯೋಧರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇದನ್ನೂ ಓದಿ:IND vs SA: ಟಿ-20 ವಿಶ್ವಕಪ್​ ದೃಷ್ಟಿಯಿಂದ ಕಾರ್ತಿಕ್​, ಹಾರ್ದಿಕ್ ಮೇಲೆ ಎಲ್ಲರ ಕಣ್ಣು

ಈ ವೇಳೆ ಕಾರ್ಯಾಚರಣೆ ನಡೆಸಿರುವ ಯೋಧರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

Last Updated : Jun 8, 2022, 1:57 PM IST

ABOUT THE AUTHOR

...view details