ಕರ್ನಾಟಕ

karnataka

By

Published : Mar 26, 2021, 4:27 PM IST

ETV Bharat / bharat

ಸಿಆರ್​ಪಿಎಫ್​​ ಮೇಲೆ ದಾಳಿ ಪ್ರಕರಣ : ಇಬ್ಬರು ಉಗ್ರರ ಬಂಧನ

ನಿನ್ನೆ ನಡೆದ ಲಾವೆಪೊರಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭೂಗತರನ್ನು ಬಂಧಿಸಲಾಗಿದೆ. ಹಾಗೆಯೇ ಅವರ ಬಳಿ ಇದ್ದ ಕಾರು, ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

Two arrested for attack on CRPF in J&K
ಸಿಆರ್​ಪಿಎಫ್​​ ಮೇಲೆ ದಾಳಿ ನಡೆಸಿದ್ದ ಪ್ರಕರಣ : ಇಬ್ಬರು ಉಗ್ರರ ಬಂಧನ

ಲಾವೇಪೊರಾ: ಸಿಆರ್‌ಪಿಎಫ್ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಕಾರ್ಯಪ್ರವೃತ್ತವಾದ ಸೇನೆ, ದಾಳಿ ಪ್ರಕರಣವನ್ನು ಭೇದಿಸಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ನಿನ್ನೆ ನಡೆದ ಲಾವೆಪೊರಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಅವರ ಬಳಿ ಇದ್ದ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೆಚ್ಚಿನ ಓದಿಗೆ:ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಯೋಧ ಹುತಾತ್ಮ, ಇಬ್ಬರಿಗೆ ಗಾಯ

ಉಗ್ರರ ಬಳಿ ಎಕೆ -47 ರೈಫಲ್‌ ಇದ್ದವು. ಆದರೆ ಕಾಶ್ಮೀರದಲ್ಲಿ ಅಪರಾಧ ಪ್ರಮಾಣ ನಿಗ್ರಹಿಸಲು ಬುಡ್ಗಮ್ ಪೊಲೀಸರು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಎಲ್‌ಇಟಿ ಸದಸ್ಯನಾಗಿರುವ ನದೀಮ್ ಅಬ್ರಾರ್ ಭಟ್ ಇಬ್ಬರು ಜವಾನರ ಸಾವಿಗೆ ಕಾರಣವಾಗಿದ್ದ. ಉಳಿದಂತೆ ಇಬ್ಬರು ಉಗ್ರರಾದ ಮುಜಾಫರ್ ಅಹ್ಮದ್ ಮಿರ್ ಮತ್ತು ಜಾವೈದ್ ಅಹ್ಮದ್ ಶೇಖ್ ಮಾರ್ಚ್ 24 ರಂದು ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಯತ್ನ ನಡೆಸಿದ್ದರು. ನದೀಮ್ ಮುಜಾಫರ್ ಅಹ್ಮದ್​ನ ಆಪ್ತ ಸಂಬಂಧಿಯಾಗಿದ್ದಾನೆ. ಉಗ್ರ ಚಟುವಟಿಕೆ ನಡೆಸಲು ಇಬ್ಬರು ವಿದೇಶಿ ಉಗ್ರರಿಗೆ ಮುಜಾಫರ್ ಅಹ್ಮದ್ ಮಿರ್ ಮತ್ತು ಶೇಖ್ ಸಹಾಯ ಮಾಡಿದ್ದರು ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ವಿದೇಶಿ ಉಗ್ರರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ತನಿಖೆ ತೀವ್ರವಾಗಿ ನಡೆಯುತ್ತಿದೆ ಎಂದಿದ್ದಾರೆ.

ABOUT THE AUTHOR

...view details