ಕರ್ನಾಟಕ

karnataka

ETV Bharat / bharat

ಬಿಜೆಡಿ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕೇಸು ದಾಖಲಿಸಲು ಹೈಕೋರ್ಟ್‌ ಆದೇಶ - ಬಿಜೆಡಿ ಶಾಸಕ ಬಿಜಯ ಶಂಕರ್ ದಾಸ್‌

ಬಿಜೆಡಿ ಶಾಸಕ ಬಿಜಯ ಶಂಕರ್ ದಾಸ್‌ ಅವರು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗೆಳತಿಯೇ ದೂರು ನೀಡಿದ್ದಾರೆ.

Orissa High court
ಓಡಿಶಾ ಹೈಕೋರ್ಟ್

By

Published : Feb 3, 2023, 10:10 PM IST

ಕಟಕ್(ಓಡಿಶಾ):ಇಲ್ಲಿನ ತಿರ್ತೋಲ್‌ನ ಬಿಜೆಡಿ ಶಾಸಕ ಬಿಜಯ ಶಂಕರ್ ದಾಸ್‌ಗೆ ಸಂಕಷ್ಟ ಎದುರಾಗಿದೆ. ಗೆಳತಿಯೇ ಲೈಂಗಿಕ ಕಿರುಕುಳದ ದೂರು ನೀಡಿದ್ದು ಪ್ರಕರಣ ದಾಖಲಿಸುವಂತೆ ಓಡಿಶಾ ಹೈಕೋರ್ಟ್, ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯ ಐಐಸಿಗೆ ನಿರ್ದೇಶನ ನೀಡಿದೆ. 2022ರ ಮೇ 13ರಂದು ಸಲ್ಲಿಸಿದ ದೂರಿನನ್ವಯ ಪ್ರಕರಣ ದಾಖಲಿಸಲು ಪೊಲೀಸರು​ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಯುವತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಯುವತಿಯ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಸ್‌.ಕೆ.ಪಾಣಿಗ್ರಾಹಿ ಅವರಿದ್ದ ಏಕಸದಸ್ಯ ಪೀಠವು ಪೊಲೀಸರಿಗೆ ನಿರ್ದೇಶನ ನೀಡಿದೆ. ಹೈಕೋರ್ಟ್‌ನ ಆದೇಶದ ದೃಢೀಕೃತ ಪ್ರತಿಯ ಅನ್ವಯ ಪೊಲೀಸ್ ಅಧಿಕಾರಿಗೆ ಹೊಸದಾಗಿ ದೂರು ನೀಡಲು ಅರ್ಜಿದಾರರಿಗೆ ತಿಳಿಸಲಾಗಿದೆ. ಆರೋಪಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರೂ ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಹೈಕೋರ್ಟ್‌ ಆದೇಶದ ನಂತರ, ಯುವತಿ ಲಿಖಿತ ದೂರಿನೊಂದಿಗೆ ಪೊಲೀಸ್​ ಠಾಣೆಯನ್ನು ಸಂಪರ್ಕಿಸಿದ್ದು,​ ಅಧಿಕಾರಿಗಳು ಕೇಸು ದಾಖಲಿಸಿಕೊಳ್ಳುವ ಭರವಸೆ ನೀಡಿದ್ದಾರೆ.

''2022ರ ಜೂನ್ 18ರಂದು ತಿರ್ಟೋಲ್ ಶಾಸಕರ ವಿರುದ್ಧ ಯುವತಿ ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಶಾಸಕರು ನನ್ನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅಮಾಯಕ ಹುಡುಗಿಯರನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ'' ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಭಯ: ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು

ABOUT THE AUTHOR

...view details