ಕರ್ನಾಟಕ

karnataka

ETV Bharat / bharat

ಬಂಗಾಳದಲ್ಲಿ ನಿಲ್ಲದ ರಕ್ತಪಾತ: ಟಿಎಂಸಿ ಕಾರ್ಯಕರ್ತನ ಹತ್ಯೆ - ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಉತ್ತರ ಪರಗಣ ಜಿಲ್ಲೆಯ ಜಗ್ದಾಲ್​ನಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ.

ಟಿಎಂಸಿ ಕಾರ್ಯಕರ್ತನ ಹತ್ಯೆ
ಟಿಎಂಸಿ ಕಾರ್ಯಕರ್ತನ ಹತ್ಯೆ

By

Published : Nov 19, 2020, 12:07 PM IST

Updated : Nov 19, 2020, 12:19 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ರಾಜ್ಯದಲ್ಲಿ ರಕ್ತಪಾತಗಳು ಹೆಚ್ಚಾಗುತ್ತಲೇ ಇವೆ.

ಟಿಎಂಸಿ ಕಾರ್ಯಕರ್ತನ ಹತ್ಯೆ

ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಈ ಮಾತಿಗೆ ಇಂಬು ನೀಡುವಂತೆ ಇಂದು ಉತ್ತರ ಪರಗಣ ಜಿಲ್ಲೆಯ ಜಗ್ದಾಲ್​ನಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಮನೆಯಿಂದ ಕರೆಯಿಸಿಕೊಂಡು ಈ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯನ್ನು ಆಕಾಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಆಕಾಶ್ ಟಿಎಂಸಿ ಪಟ್ಟಣ ಅಧ್ಯಕ್ಷ ಸೋಮನಾಥ್ ಶ್ಯಾಮ್ ಅವರ ಅನುಯಾಯಿ ಎಂದು ಹೇಳಲಾಗುತ್ತಿದೆ.

Last Updated : Nov 19, 2020, 12:19 PM IST

ABOUT THE AUTHOR

...view details