ಕರ್ನಾಟಕ

karnataka

ETV Bharat / bharat

'ಕೌನ್ ಬನೇಗಾ ಕರೋಡ್​ಪತಿ -13' ಆರಂಭಕ್ಕೆ ಇನ್ನು 3 ದಿನವಷ್ಟೇ ಬಾಕಿ: ಈ ಬಾರಿ ಇರಲಿದೆ 'ಧುಕ್-ಧುಕ್ ಜಿ' - amitabh bachchan show

ಇದೇ ಆಗಸ್ಟ್​ 23 ರಿಂದ ಕೌನ್ ಬನೇಗಾ ಕರೋಡ್ ಪತಿ- 13 ಆರಂಭಗೊಳ್ಳುತ್ತಿದೆ. ಈ ಬಾರಿ 'ಫಾಸ್ಟ್ ಫಿಂಗರ್ ಫಸ್ಟ್ - ಟ್ರಿಪಲ್ ಟೆಸ್ಟ್' ಇರಲಿದ್ದು, ಸ್ಪರ್ಧಿಗಳು ಈ ಹಿಂದಿನಂತೆ ಒಂದು ಪ್ರಶ್ನೆಯ ಬದಲಿಗೆ ಮೂರು ಜಿಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

three days left for kon banega karodpati season 13
ಅಮಿತಾಬ್​ ಬಚ್ಚನ್​

By

Published : Aug 19, 2021, 3:49 PM IST

'ಕೌನ್ ಬನೇಗಾ ಕರೋಡ್ ಪತಿ'ಯ ಹೊಸ ಸೀಸನ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಈ ಕಾರ್ಯಕ್ರಮವು ಸೋನಿ ಟಿವಿಯಲ್ಲಿ ಆಗಸ್ಟ್ 23 ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಅಮಿತಾಬ್ ಬಚ್ಚನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿ ಕೆಬಿಸಿ ಅಚ್ಚರಿಗಳಿಂದ ಕೂಡಿದೆ. ಕೆಲವು ಬದಲಾವಣೆಗಳನ್ನು ಸಹ ಕಾಣಬಹುದು.

'ಧುಕ್-ಧುಕ್ ಜಿ':

ಈ ಬಾರಿ' ಕೆಬಿಸಿ' ಸೆಟ್ ಕೂಡ ಸಾಕಷ್ಟು ಆಕರ್ಷಕವಾಗಿರಲಿದೆ. ಅನೇಕ ಹೊಸ ವಿಚಾರಗಳನ್ನು ಕಾಣಬಹುದು. ಗೇಮ್ ಟೈಮರ್ ಅನ್ನು 'ಧುಕ್-ಧುಕ್ ಜಿ' ಎಂದು ಹೆಸರಿಸಲಾಗಿದೆ.

ಫಾಸ್ಟೆಸ್ಟ್​ ಫಿಂಗರ್ ಫಸ್ಟ್​-​ ಟ್ರಿಪಲ್ ಟೆಸ್ಟ್​​:

ಫಾಸ್ಟೆಸ್ಟ್ ಫಿಂಗರ್ ಫಸ್ಟ್, ಇದರೊಂದಿಗೆ ಪ್ರದರ್ಶನ ಆರಂಭವಾಗುತ್ತದೆ, ಇದನ್ನು 'ಫಾಸ್ಟ್ ಫಿಂಗರ್ ಫಸ್ಟ್ - ಟ್ರಿಪಲ್ ಟೆಸ್ಟ್' ಎಂದು ಬದಲಾಯಿಸಲಾಗಿದೆ. ಇದು ಸ್ಪರ್ಧಿಗಳಿಗೆ ಸ್ವಲ್ಪ ಸವಾಲಾಗಿರಬಹುದು. ಏಕೆಂದರೆ ಈ ಬಾರಿ ಒಂದು ಪ್ರಶ್ನೆಯ ಬದಲು, ಸ್ಪರ್ಧಿಗಳು ಮೂರು ಜಿಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತೀ ಸ್ಪರ್ಧಿಯು ಕೇಳಿದ ಪ್ರಶ್ನೆಗೆ ಉತ್ತರಿಸಲು ತೆಗೆದುಕೊಂಡ ಸಮಯವನ್ನು ಲೀಡರ್‌ಬೋರ್ಡ್ ತೋರಿಸುತ್ತದೆ. ಕಡಿಮೆ ಸಮಯದಲ್ಲಿ ಎಲ್ಲ ಮೂರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು ನೇರವಾಗಿ ಹಾಟ್ ಸೀಟ್​​ ತಲುಪುತ್ತಾರೆ.

ABOUT THE AUTHOR

...view details