ಕರ್ನಾಟಕ

karnataka

ETV Bharat / bharat

ಅತೀಕ್, ಅಶ್ರಫ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದ ಅಲ್ ಖೈದಾ - ಉತ್ತರ ಪ್ರದೇಶ

ಕಳೆದ ವಾರ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಹೆಸರಿನಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

Atiq Ahmed
ಪೊಲೀಸರಿಂದ ತನಿಖೆ ತೀವ್ರ

By

Published : Apr 22, 2023, 6:59 PM IST

ಜೈಪುರ (ರಾಜಸ್ಥಾನ):ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಅತೀಕ್ ಅಹ್ಮದ್ ಮತ್ತು ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಲಾಗಿದೆ. ಅಲ್ ಖೈದಾ ಹೆಸರಿನಲ್ಲಿ 7 ಪುಟಗಳ ನಿಯತಕಾಲಿಕೆ ಹೊರಡಿಸುವ ಮೂಲಕ ಹತ್ಯೆಯ ಸೇಡು ತೀರಿಸಿಕೊಳ್ಳುವುದಾಗಿ ದಮ್ಕಿ ಹಾಕಿರುವುದು ಕಂಡುಬಂದಿದೆ. ಈ ಬೆದರಿಕೆಯ ನಂತರ, ರಾಜಸ್ಥಾನ ಪೊಲೀಸರು ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇಡೀ ಪ್ರಕರಣವನ್ನು ರಾಜಸ್ಥಾನ ಪೊಲೀಸ್ ಹೆಡ್​ಕ್ವಾರ್ಟರ್ಸ್ ಮೇಲ್ವಿಚಾರಣೆ ನಡೆಸುತ್ತಿದೆ. ಐಬಿ, ಎಟಿಎಸ್ ಮತ್ತು ಎಸ್‌ಒಜಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಈ ಬೆದರಿಕೆಯಲ್ಲಿ ಬಿಹಾರದ ಹಿಂಸಾಚಾರವನ್ನೂ ಉಲ್ಲೇಖಿಸಲಾಗಿದೆ.

ತೀವ್ರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು:ಡಿಜಿಪಿ ಉಮೇಶ್ ಮಿಶ್ರಾ ಪ್ರಕಾರ, ರಾಜಸ್ಥಾನದ ಎಲ್ಲಾ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿವೆ. ರಾಜ್ಯದ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಈ ಬೆದರಿಕೆಯನ್ನು ಭಯೋತ್ಪಾದಕ ಸಂಘಟನೆ ಅಲ್-ಖೈದಾ ಹೆಸರಿನಲ್ಲಿ ನೀಡಲಾಗಿದೆಯೇ ಅಥವಾ ಬೇರೆ ಯಾವುದಾದರೂ ಸಂಘಟನೆಯಿಂದ ನೀಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಡಿಜಿಪಿ ಉಮೇಶ್ ಮಿಶ್ರಾ ಅವರು ಈ ಸಂಪೂರ್ಣ ಜವಾಬ್ದಾರಿಯನ್ನು ಎಟಿಎಸ್- ಎಸ್‌ಒಜಿ ಎಡಿಜಿ ಅಶೋಕ್ ರಾಥೋಡ್ ಅವರಿಗೆ ವಹಿಸಿದ್ದಾರೆ. ಈ ಬಗ್ಗೆ ತೀವ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಎಡಿಜಿ ಅಶೋಕ್ ರಾಥೋಡ್ ತಿಳಿಸಿದರು.

ಇದನ್ನೂ ಓದಿ:ತಿರುವಿನಲ್ಲಿ ಡಿಕ್ಕಿಯಾಗಿ ಬಸ್​ ಮೇಲೆ ಉರುಳಿಬಿದ್ದ ಟ್ರಕ್​​: 7 ಮಂದಿ ದಾರುಣ ಸಾವು

ಪ್ರಕರಣದ ಹಿನ್ನೆಲೆ ಏನು?:ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪತ್ರಕರ್ತರಂತೆ ಬಂದಿದ್ದ ಮೂವರು ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಮೇಲೆ ಗುಂಡಿಕ್ಕಿ ಕೊಲೆ ಮಾಡಿದ್ದರು. ಪೊಲೀಸ್ ರಕ್ಷಣೆಯ ನಡುವೆ ಇಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಕೊಲೆಯ ಲೈವ್ ವಿಡಿಯೋ ಕೂಡಾ ಹೊರಬಿದ್ದಿತ್ತು. ಅರುಣ್ ಮೌರ್ಯ, ಸನ್ನಿ ಮತ್ತು ಲವಕೇಶ್ ತಿವಾರಿ ಕೊಲೆ ಮಾಡಿದ ಆರೋಪಿಗಳು. ಅತೀಕ್ ಮತ್ತು ಅಶ್ರಫ್ ಮಾಧ್ಯಮಗಳೊಂದಿಗೆ ಮಾತನಾಡಲು ಪ್ರಾರಂಭಿಸಿದ ಸಂದರ್ಭದಲ್ಲೇ ಘಟನೆ ನಡೆದಿತ್ತು. ಮೂವರು ಆರೋಪಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಉತ್ತರ ಪ್ರದೇಶ ಪೊಲೀಸರು ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ, ಅತೀಕ್ ಅಹ್ಮದ್ ಅವರ ಪುತ್ರನ ಎನ್​ಕೌಂಟರ್ ಕೂಡಾ ನಡೆದಿತ್ತು.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ​ಧನ್ಯವಾದ ತಿಳಿಸಿದ ಡೇವಿಡ್ ವಾರ್ನರ್

ಅಲ್ ಖೈದಾ ಬೆದರಿಕೆಯಲ್ಲೇನಿದೆ?:ಅಲ್ ಖೈದಾ ಹೆಸರಿನಲ್ಲಿ ಸೇಡು ತೀರಿಸಿಕೊಳ್ಳುವ ಬೆದರಿಕೆಯ ನಂತರ, ಭದ್ರತಾ ಸಂಸ್ಥೆಗಳು ದೇಶಾದ್ಯಂತ ಎಚ್ಚರಿಕೆ ನೀಡಿವೆ. ಪೊಲೀಸರು ಮತ್ತು ಸರ್ಕಾರ ಸಂಪೂರ್ಣ ನಿಗಾ ವಹಿಸಿದೆ. ಅಷ್ಟೇ ಅಲ್ಲ, ಭಯೋತ್ಪಾದಕ ಸಂಘಟನೆ ಅಲ್ ಖೈದಾ ಹೆಸರಿನಲ್ಲಿ ಭಾರತವಲ್ಲದೇ ಇತರ ದೇಶಗಳಿಗೂ ಬೆದರಿಕೆ ಹಾಕಲಾಗಿದೆ. ಚೀನಾ, ಬಾಂಗ್ಲಾದೇಶ, ಸೌದಿ, ಅಮೆರಿಕ ಸೇರಿದಂತೆ ಇತರ ದೇಶಗಳಿಗೂ ಅಲ್ ಖೈದಾ ಬೆದರಿಕೆ ಹಾಕಿದೆ. ಬಿಹಾರ ಮತ್ತು ಕಾಶ್ಮೀರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ಪೊಲೀಸರ ಭದ್ರತಾ ವಿವರವೂ ಸೋರಿಕೆ

ABOUT THE AUTHOR

...view details