ಕರ್ನಾಟಕ

karnataka

ಹರಿದ್ವಾರದಲ್ಲಿ ಶಿವರಾತ್ರಿ ಸಂಭ್ರಮ: ಪವಿತ್ರ ಸ್ನಾನ ಮಾಡಿ ಶಿವನ ಕೃಪೆಗೆ ಪಾತ್ರರಾದ ಭಕ್ತರು

By

Published : Mar 11, 2021, 9:55 AM IST

ಮಹಾ ಶಿವರಾತ್ರಿ ಹಿನ್ನೆಲೆ ಮುಂಜಾನೆಯಿಂದಲೇ ದೇಶಾದ್ಯಂತ ಭಕ್ತರು ಶಿವ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹರಿದ್ವಾರ, ವಾರಣಾಸಿ, ಮಹಾರಾಷ್ಟ್ರದಲ್ಲಿ ಹೇಗಿದೆ ನೋಡಿ ಶಿವರಾತ್ರಿ ಸಂಭ್ರಮ.

ಪವಿತ್ರ ಸ್ನಾನ
ಪವಿತ್ರ ಸ್ನಾನ

ಹರಿದ್ವಾರ: ಎಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಇಂದು ಮುಂಜಾನೆ ಹರಿದ್ವಾರದ ಹರ್ ಕಿ ಪೌರಿ ಘಾಟ್‌ ಬಳಿ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿ ಶಿವನ ಕೃಪೆಗೆ ಪಾತ್ರರಾದರು.

ಹರಿದ್ವಾರದ ಹರ್ ಕಿ ಪೌರಿ ಘಾಟ್‌ ಬಳಿ ಪವಿತ್ರ ಸ್ನಾನ ಮಾಡಿದ ಭಕ್ತರು

ಮುಂಜಾನೆಯಿಂದಲೇ ದೇಶಾದ್ಯಂತ ಭಕ್ತರು ಶಿವ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಗೋರಖ್‌ಪುರದ ಮಹಾದೇವ್ ದೇವಸ್ಥಾನ ಹಾಗೂ ವಾರಣಾಸಿಯ ಕಾಶಿ ವಿಶ್ವನಾಥನ ದರ್ಶನಕ್ಕಾಗಿ ದೇವಾಲಯದ ಹೊರಗಡೆ ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂದಿತು.

ಬಾಬುಲ್ನಾಥ್ ದೇವಸ್ಥಾನ

ಇನ್ನು ಮಹಾರಾಷ್ಟ್ರದಲ್ಲಿ ಕೋವಿಡ್​-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನ ಮತ್ತು ಮುಂಬೈನ ಬಾಬುಲ್ನಾಥ್ ದೇವಸ್ಥಾನವನ್ನು ಮಹಾ ಶಿವರಾತ್ರಿಯಂದು ಮುಚ್ಚಲಾಗಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮತ್ತೊಂದೆಡೆ ಮಧ್ಯಪ್ರದೇಶದ ಮಹಾಕಾಳ ದೇವವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ್​ ಪೂಜೆಗಳು ನಡೆಯುತ್ತಿವೆ. ಭಕ್ತರು ಬೆಳ್ಳಂ ಬೆಳಗ್ಗೆ ಮಹಾಕಾಲನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ABOUT THE AUTHOR

...view details