ಭಾರತದ ಮೊದಲ ವಾಟರ್ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಆರಂಭವಾಗಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರೀಡ್ ಬೋಟ್ಗಳು ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಮುದ್ರ ತೀರವನ್ನು ಹೆಚ್ಚಾಗಿ ಹಿಂದಿರುವ ಕೇರಳದಲ್ಲಿ ಈ ವಾಟರ್ ಮೇಟ್ರೋ ಕೂಡ ನಗರ ಸಮೂಹ ಸಾರಿಗೆ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸಲಿದ್ದು, ಕೊಚ್ಚಿಯ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 1,137 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ವಾಟರ್ ಮೆಟ್ರೊಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ದೇಶದ ಮೊದಲ ವಾಟರ್ ಮೆಟ್ರೋ: ಕೊಚ್ಚಿ ಮೆಟ್ರೋ ರೈಲು ಕಾರ್ಪೋರೇಷನ್ (ಕೆಎಮ್ಆರ್ಎಲ್) ಮೇಲ್ಮೈ ಮೆಟ್ರೋ ಸೇವೆಗಳ ಜೊತೆಗೆ ನೀರಿನ ಮೆಟ್ರೋ ಸೇವೆ ಹೊಂದಿರುವ ದೇಶದ ಏಕೈಕ ಮೆಟ್ರೋ ಎಂಬ ಹೆಗ್ಗಳಿಕೆ ಹೊಂದಿದೆ. ಕೊಚ್ಚಿ ವಾಟರ್ ಮೆಟ್ರೋ ಏಷ್ಯಾದ ಅತ್ಯುನ್ನತ ಸಮಗ್ರ ನೀರಿನ ಸಾರಿಗೆ ವ್ಯವಸ್ಥೆ ಎಂಬ ಹೊಗ್ಗಳಿಕೆ ಹೊಂದಿದೆ.
ಮೊದಲ ಹಂತದಲ್ಲಿ ಈ ಸೇವೆ ಹೈ ಕೋರ್ಟ್ ಟರ್ಮಿನಲ್ನಿಂದ ವ್ಯಾಪಿನ್ ಟರ್ಮಿನಲ್ ವರೆಗೆ ಸೇವೆ ನೀಡಲಿದೆ. ಬಳಿಕ ಈ ಮೆಟ್ರೋ ವ್ಯಾತಿಲ್ ಕಕ್ಕನಾಡ್ ವರೆಗೆ ವಿಸ್ತರಣೆ ಆಗಲಿದೆ. ಈ ಕೊಚ್ಚಿ ವಾಟರ್ 76ಕಿ.ಮೀ ಉದ್ದ ಸಾಗಲಿದ್ದು, 38 ಟರ್ಮಿನಲ್ ಸಂಪರ್ಕ ಮಾಡಲಿರುವ ಅತಿ ದೊಡ್ಡ ಸಾರಿಗೆ ನೆಟ್ವರ್ಕ್ ಹೊಂದಿದೆ. ಮತ್ತೊಂದು ವಿಶೇಷತೆ ಎಂದರೆ, ಈ ಮೆಟ್ರೋ ಸಾಂಪ್ರಾದಾಯಿಕ ಮೆಟ್ರೋ ಸೇವೆ ಅಂತೆ ಅಲ್ಲದೇ, ಇದು ಹಿನ್ನೀರಿನ ಸೌಂದರ್ಯ ಅನುಭವಿಸುವ ಅವಕಾಶವನ್ನು ನೀಡುತ್ತದೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ.