ಸೂರತ್(ಗುಜರಾತ್): ಬರೋಬ್ಬರಿ 12 ವರ್ಷಗಳ ಹಿಂದೆ ಪ್ರೇಮ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಇದೀಗ ದೀಕ್ಷೆ ಪಡೆದುಕೊಂಡಿದೆ. ತಮ್ಮ 36ನೇ ವಯಸ್ಸಿನಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಪ್ರಿಯಾಂಕ್ ಕಿರಣ್ ಮತ್ತು ಭವ್ಯತಾ ಪ್ರಿಯಾಂಕ್ ವೊಹೆರಾ ಈ ನಿರ್ಧಾರ ಕೈಗೊಂಡಿದ್ದು, ಪತ್ನಿ ಜೊತೆ ಸೇರಿ ಸೂರತ್ನ ವೆಸು ರಾಮ್ ವಿಹಾರ್ನಲ್ಲಿ ದೀಕ್ಷೆ ಪಡೆದುಕೊಂಡಿದ್ದಾರೆ. ಈ ಹಿಂದೆ ಇವರ ಇಬ್ಬರು ಮಕ್ಕಳು ದೀಕ್ಷೆ ಪಡೆದುಕೊಂಡಿದ್ದಾರೆ.
ಮೂರು ದಿನಗಳ ಕಾಲ ದೀಕ್ಷಾ ಉತ್ಸವ: ರಾಮ್ ವಿಹಾರ್ನಲ್ಲಿ ಮೂರು ದಿನಗಳ ಕಾಲ ದೀಕ್ಷಾ ಉತ್ಸವ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಗುಜರಾತ್ ಮತ್ತು ಮುಂಬೈನ ಪ್ರಸಿದ್ಧ ಸಂಗೀತಗಾರರು, ಬರಹಗಾರರು ಮತ್ತು ಕವಿಗಳು ಭಾಗಿಯಾಗಿದ್ದರು. ಪ್ರಿಯಾಂಕ್ ವೊಹೆರಾ ಅಹಮದಾಬಾದ್ನಲ್ಲಿ ಉದ್ಯಮಿಯಾಗಿದ್ದು, ಅವರ ಪತ್ನಿ ಗೃಹಣಿಯಾಗಿದ್ದಾರೆ. ಇದೀಗ ಇಬ್ಬರು ದೀಕ್ಷೆ ಪಡೆದುಕೊಂಡಿದ್ದಾರೆ.